ಹಳ್ಳಿ ಪೈಟ್ ಸದ್ದಿಲ್ಲದೆ ಆಕಾಡ ಸಜ್ಜು!

ಹಳ್ಳಿ ಪೈಟ್ ಸದ್ದಿಲ್ಲದೆ ಆಕಾಡ ಸಜ್ಜು!

ಹೊಳವನಹಳ್ಳಿ : ವಿಜಯ್ ಶಂಕರ್  ಗ್ರಾ.ಪಂ ಚುಣಾವಣೆಗೆ ಕೊರಟಗೆರೆ ತಾಲ್ಲೂಕು ಸೇರಿದಂತೆ ರಾಜ್ಯಾದ್ಯಾಂತ ಮೀಸಲಾತಿ ಪಟ್ಟಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಹಳ್ಳಿ ರಾಜಕೀಯ ಚುರುಕುಗೊಂಡಿದೆ ಮತದಾರ ಮಾತ್ರ ನಮ್ಮ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿಗೆ ಮತ ಚಾಲಾಯಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೊರೋನಾ ಸೊಂಕಿನ ಹೀನ್ನೆಲೆಯಲ್ಲಿ ಕಳೆದ 4-5 ತಿಂಗಳುಗಳಿಂದ ಮುಂದೂಡಿಕೆಯಾಗಿದ್ದ ಪಂಚಾಯ್ತಿ ಚುಣಾವಣೆಗಳನ್ನು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮುಗಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇತ್ತಿಚ್ಚಗೆ ಕ್ಷೇತ್ರವಾರು ಮಿಸಲಾತಿ ಪಟ್ಟಿ ಪ್ರಕಟವಾಗಿದ್ದು ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ ರಾಜಕೀಯ ಚಟುವಟಿಕೆ ಪ್ರತಿ ಹಳ್ಳಿ ಸೇರಿದಂತೆ ಎಲ್ಲಾ ಪಂಚಾಯ್ತಿಗಳಲ್ಲಿಯೂ ಗರಿಗೆದರಿದೆ
ತಾಲ್ಲೂಕಿನ 24 ಗ್ರಾ.ಪಂ ಅಕಾಂಕ್ಷಿಗಳು ತೆರೆಮರೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ ಅಲ್ಲದೆ ಸಮಾಜ ಸೇವೆಗೂ ಮುಂದಾಗಿದ್ದಾರೆ ಕಳೆದ ಚುಣಾವಣೆಯಲ್ಲಿ ಪರಭವಗೊಂಡ ಅಭ್ಯರ್ಥಿಗಳು ಈ ಬಾರೀ ಶತಾಯ ಗತಾಯ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ ಅಲ್ಲದೆ ಹಳೆಯ ಸದಸ್ಯರ ವೈಫಲ್ಯಗಳನ್ನು ಎತ್ತಿ ತೋರಿಸುವ ಮೂಲಕ ಮತದಾರನ ಓಲೈಕೆಗೆ ಮುಂದಾಗಿದ್ದಾರೆ ಇನ್ನೂ ಹಳೆಯ ಸದಸ್ಯರ ಕತೆಯು ಇದಕ್ಕಿಂತ ವಿಭಿನ್ನವಾಗಿಲ್ಲ ತಾವು ತಮ್ಮ ಕ್ಷೇತ್ರದಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸಗಳು ಮತ್ತು ಜನ ಸೇವೆ ಮಾಡಿರುವುದ್ದನ್ನು ಮತ ಸೇಳೆಯುವ ಕೆಲಸದಲ್ಲಿ ಮುಂದಾಗಿದ್ದಾರೆ.

ಯುವಕರೆ ಹೆಚ್ಚು ಅಕಾಂಕ್ಷಿಗಳು

ಕೊರೋನಾ ಸಂಕಷ್ಟಕ್ಕೆ ಸಿಲುಕಿ ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ತಮ್ಮ ತಮ್ಮ ಗ್ರಾಮಕ್ಕೆ ವಾಪಾಸ್ಸದ ಯುವಕರೆ ಹೆಚ್ಚಿನ ಸಂಖ್ಯೆಯಲ್ಲಿ ಅಕಾಂಕ್ಷಿಗಳಾಗಿದ್ದಾರೆ ಅಲ್ಲದೆ ಮತದಾರ ಪ್ರಭುಗಳಿಗೆ ನಮ್ಮ ಗೆಲುವಿಗಾಗಿ ನೀವು ಶ್ರಮಿಸಿದರೆ ನಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರು, ಸ್ವಚ್ಛತೆ ,ರಸ್ತೆ ಅಭಿವೃದ್ಧಿ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಮಾಡಿ ನಮ್ಮ ಗ್ರಾಮವನ್ನೇ ಮಾದರಿ ಗ್ರಾಮವಾಗಿ ಮಾಡುತ್ತೆವೆ ಎಂದು ಅಶ್ವಾಸನೆ ನಿಡುತ್ತಿದ್ದಾರೆ

ಕಳೆದ ಭಾರಿ ಗ್ರಾ.ಪಂ. ಆಯ್ಕೆಯಾಗಿದ್ದ ಹಳೆಯ ಸದಸ್ಯರಿಗೆ ಮೀಸಲು ಕ್ಷೇತ್ರದ ಸಮಸ್ಯೆ ಎದುರಾಗಿದ್ದು ತಾವು ಸ್ಪರ್ಧಿಸಲು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ ಅಲ್ಲದೆ ಈ ಬಾರೀ ಮೀಸಲು ಪಟ್ಟಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ತಮ್ಮ ತಮ್ಮ ಪತ್ನಿಯರನ್ನು ಚುಣಾವಣಾ ಕಣದಲ್ಲಿ ನಿಲ್ಲಿಸಿ ಅವರನ್ನು ಜಯಶೀಲರನ್ನಾಗಿ ಮಾಡಿ ಅವರ ಹೆಸರಿನಲ್ಲಿ ತಾವು ಪಂಚಾಯ್ತಿಯಲ್ಲಿ ದರ್ಬಾರು ನಡೆಸಲು ಮುಂದಾಗಿದ್ದಾರೆ.

ತಾಲ್ಲೂಕಿನಲ್ಲಿ 24 ಪಂಚಾಯ್ತಿಗಳಿದ್ದು ಅತಿಹೆಚ್ಚು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ತೆಕ್ಕಯಲ್ಲಿದರೆ ಬೆರಳೆಣಿಕೆಯಷ್ಟು ಭಾ.ಜ.ಪ, ತೆಕ್ಕೆಯಲ್ಲಿದೆ ತಮ್ಮ ತೆಕ್ಕೆಯಲ್ಲಿರುವ ಪಂಚಾಯ್ತಿಗಳನ್ನು ಉಳುಸಿಕೊಳ್ಳಲು ದೊಡ್ಡ ಮಟ್ಟದ ರಾಜಕಾರಣಿಗಳು ತಮ್ಮ ಅಭ್ಯರ್ಥಿಗಳ ಪರವಾಗಿ ತೆರೆ ಮರೆಯಲ್ಲಿ ಕೆಲಸ ಮಾಡುತಿದ್ದಾರೆ ಅದರೆ ಮತದಾರ ಮಾತ್ರ ತಮಗೆ ಏನೂ ತಿಳಿದಿಲ್ಲವೆಂಬಂತೆ ಜಾಣ ಮೌನವಾಗಿದ್ದಾರೆ ಆದರೆ ಸದಸ್ಯರಾಗಲು ಇಚ್ಛಿಸುತ್ತಿರುವ ಅಕಾಂಕ್ಷಿಗಳು ಮಾತ್ರ ತಮ್ಮ ಅದೃಷ್ಟ ಪರೀಕ್ಷೆ ಹೇಗಿದೆ ಎಂಬುದು ಕಾದು ನೋಡಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos