ಬೆಂಗಳೂರು: ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸಿದ್ದ ವಿಶ್ವನಾಥ್ ಹಾವೇರಿ ಅವರಿಗೂ ಚಾನ್ಸ್ ಸಿಕ್ಕಿತ್ತು. ‘ಬೃಂದಾವನ’ ಧಾರಾವಾಹಿಯಲ್ಲಿ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಅವರಿಗೆ ಬೇಸರ ಆಗುವ ಘಟನೆ ನಡೆದಿದೆ. ಧಾರಾವಾಹಿ ಆರಂಭ ಆಗಿ ಒಂದು ತಿಂಗಳು ತುಂಬುವ ಮೊದಲೇ ಧಾರಾವಾಹಿಯಿಂದ ವಿಶ್ವನಾಥ್ ಅವರು ಹೊರ ಬಿದ್ದಿದ್ದಾರೆ. ಈ ವಿಚಾರ ಅನೇಕರಿಗೆ ಬೇಸರ ಮೂಡಿಸಿದೆ.
ಸಾಮಾನ್ಯವಾಗಿ ಕಲಾವಿದರಿಗೆ ಬೇರೆ ಆಫರ್ ಸಿಕ್ಕರೆ, ತಂಡದ ಜೊತೆ ಕಿರಿಕ್ ಆದರೆ ಕಲಾವಿದರು ಚೇಂಜ್ ಆಗೋದು ಸಾಮಾನ್ಯ. ಆದರೆ, ಏನೂ ಇಲ್ಲದೇ ವಿಶ್ವನಾಥ್ ಅವರನ್ನು ‘ಬೃಂದಾವನ’ ಧಾರಾವಾಹಿಯಿಂದ ಹೊರಗೆ ಇಡಲಾಗಿದೆ. ಧಾರಾವಾಹಿಯ ನಾಯಕ ಆಕಾಶ್ ಪಾತ್ರದಿಂದ ವಿಶ್ವನಾಥ್ ಹೊರ ಹೋಗಿದ್ದಾರೆ. ರೀಲ್ಸ್ ಮಾಡಿ ಫೇಮಸ್ ಆಗಿರುವ ವರುಣ್ ಆರಾಧ್ಯ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.