ವಧುವಿನ ನಗ್ನ ಫೋಟೋ ವಾಟ್ಸಾಪ್ ನಲ್ಲಿ ಬಂದಿದ್ದಕ್ಕೆ ಮುರಿದುಬಿದ್ದ ಮದುವೆ!

ವಧುವಿನ ನಗ್ನ ಫೋಟೋ ವಾಟ್ಸಾಪ್ ನಲ್ಲಿ ಬಂದಿದ್ದಕ್ಕೆ ಮುರಿದುಬಿದ್ದ ಮದುವೆ!

ನವದೆಹಲಿ, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಮಂಟಪದಲ್ಲಿ ಹಲವಾರು ಕಾರಣಗಳಿಗೆ ಮದುವೆ ಮುರಿದು ಬಿದ್ದ ಘಟನೆಗಳು ನಡೆದಿವೆ. ಅಂತಹದ್ದೇ ಮತ್ತೊಂದು ಪ್ರಕರಣ ದೆಹಲಿಯಲ್ಲಿ ನಡೆದಿದೆ. ಪತಿ-ಪತ್ನಿಯರಾಗುವ ಕೊನೆ ಕ್ಷಣದಲ್ಲಿ ವರನ ವಾಟ್ಸಾಪ್ ಗೆ ಮಧುವಿನ ನಗ್ನ ಪೋಟೋ ಬಂದು ಮದುವೆ ಮರಿದು ಬಿದ್ದಿದೆ. ‌ಫರೀದಾಬಾದ್‍ ನಿಂದ ದೆಹಲಿಯ ಲೋನಿ ಕಾಲೋನಿಗೆ ವರನ ಮೆರವಣಿಗೆ ಬಂದಿತ್ತು. ನಂತರ ವರಮಾಲಾ ಕಾರ್ಯಕ್ರಮ ಕೂಡಾ ನೆರವೇರಿತ್ತು. ತಡರಾತ್ರಿ 2 ಗಂಟೆಗೆ ಸಪ್ತಪದಿ ಕಾರ್ಯಕ್ರಮ ಇತ್ತು. ಇದಕ್ಕಾಗಿ ವಧು – ವರ ಮದುವೆ ಮಂಟಪಕ್ಕೆ ಬಂದಾಗ ವರನ ಮೊಬೈಲ್‍ ಗೆ ಯುವಕನೊಬ್ಬ ವಾಟ್ಸಾಪ್‍ ಮಾಡಿದ್ದಾನೆ. ಅದ್ರಲ್ಲಿ ವಧುವಿನ ನಗ್ನ ಫೋಟೋ ಕಂಡು ಶಾಕ್‍ ಆಗಿದ್ದು, ತನ್ನ ಮನೆಯವರಿಗೂ ತೋರಿಸಿದ್ದಾನೆ. ನಗ್ನ ಫೋಟೋ ನೋಡಿದ ಕುಟುಂಬಸ್ಥರು ಮದುವೆ ಮುರಿದಿದ್ದಾರೆ. ಬಳಿಕ ಹೆಣ್ಣು-ಗಂಡಿನ ಕಡೆಯವರಿಗೆ ಜಗಳವಾಗಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವೇಳೆ ವರನ ಕಡೆಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos