ಯುವಿ ಬಾಂಗ್ರಾ ನೃತ್ಯ

ಯುವಿ ಬಾಂಗ್ರಾ ನೃತ್ಯ

ಮುಂಬೈ , ಡಿ. 5 : ಸ್ಫೋಟ್ ಕ ಬ್ಯಾಟ್ಸ್ ಮನ್ , ಮಾಜಿ ಆಟಗಾರ ಯುವರಾಜ್ ಸಿಂಗ್ ಪಂಜಾಬಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಸ್ಟೈಲಿಶ್ ಆಟಗಾರ ಮನೀಶ್ ಪಾಂಡೆ ಆರತಕ್ಷತೆಯಲ್ಲಿ ಮಾಜಿ ಆಟಗಾರ ಯುವರಾಜ್ ಸಿಂಗ್ ಪಂಜಾಬಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮನೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಆಚರಣೆ ಎರಡು ದಿನಗಳ ಕಾಲ ನಡೆದಿದೆ. ಮನೀಶ್ ಅವರ ಆರತಕ್ಷತೆಯಲ್ಲಿ ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಭಾಗವಹಿಸಿದ್ದರು. ಈ ವೇಳೆ ಅವರು ಡೋಲ್ ಸದ್ದಿಗೆ ಬಾಂಗ್ರಾ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಯುವರಾಜ್ ಅವರು ಒಬ್ಬರೇ ನೃತ್ಯ ಮಾಡುತ್ತಿರುವುದನ್ನು ನೋಡಿ ಮನೀಶ್ ಕೂಡ ಅವರ ಜೊತೆ ಸೇರಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಡೋಲ್ ಬಾರಿಸುತ್ತಿದ್ದವರು ಯುವರಾಜ್ ಹಾಗೂ ಮನೀಶ್ ಡ್ಯಾನ್ಸ್ ನೋಡಿ ಖುಷಿಪಟ್ಟಿದ್ದಾರೆ. ಯುವರಾಜ್ ಸಿಂಗ್ ತಮ್ಮ ಇನ್ಸ್ಟಾದಲ್ಲಿ ಮನೀಶ್ ಹಾಗೂ ಆಶ್ರಿತಾ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಪ್ರೀತಿಯ ಮನೀಶ್ ಹಾಗೂ ಆಶ್ರಿತಾ ನೀವು ಜೀವನದಲ್ಲಿ ಯಾವಾಗಲೂ ಸಂತೋಷವಾಗಿರಿ ಎಂದು ನಾನು ಹಾರೈಸುತ್ತೇನೆ. ಉಳಿದರು ನಮ್ಮ ಹಿಂದೆ ನಿಂತಿರುವ ಡೋಲ್ ಬಾರಿಸುವವನನ್ನು ನೋಡಿ” ಎಂದು ಬರೆದುಕೊಂಡಿದ್ದರು.
ಸೋಮವಾರ ಮನೀಶ್, ನಟಿ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದರು. ಹಿಂದಿನ ದಿನ ಎಂದರೆ ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮನೀಶ್ ಅವರ ನಾಯಕತ್ವದಲ್ಲಿ ತಮಿಳುನಾಡಿನ ತಂಡದ ವಿರುದ್ಧ ಕರ್ನಾಟಕ ತಂಡ ಜಯಗಳಿಸಿತ್ತು. ಈ ಪಂದ್ಯದಲ್ಲಿ ಮನೀಶ್ 60 ರನ್ಗಳನ್ನು ಗಳಿಸಿದ್ದರು.

 

 

 

ಫ್ರೆಶ್ ನ್ಯೂಸ್

Latest Posts

Featured Videos