ಉತ್ತಮ ಆರೋಗ್ಯಕ್ಕಾಗಿ ಪಪ್ಪಾಯ

ಉತ್ತಮ ಆರೋಗ್ಯಕ್ಕಾಗಿ ಪಪ್ಪಾಯ

ಬೆಂಗಳೂರು, ಏ. 22 ನ್ಯೂಸ್ ಎಕ್ಸ್ ಪ್ರೆಸ್: ಪಪ್ಪಾಯವನ್ನು ‘ಆಲ್ ರೌಂಡ್ ಸಮ್ಮರ್ ಫ್ರೂಟ್’ ಎಂದು ಕರೆಯಲಾಗುತ್ತದೆ. ಪಪ್ಪಾಯವನ್ನು ಸೇವಿಸಬಹುದು, ಚರ್ಮದ ಭಾಗಗಳಿಗೆ ಪೇಸ್ಟ್ ಮಾಡಿ ಬಳಕೆ ಮಾಡಬಹುದು, ಕೂದಲ ಆರೋಗ್ಯಕ್ಕಾಗಿ ಪ್ಯಾಕ್  ರೀತಿ ಮಾಡಿ ಉಪಯೋಗಿಸಬಹುದು. ಇದರ ಔಷಧೀಯ ಗುಣಗಳಂತೂ ಅಪರಿಮಿತ. ಆದ್ದರಿಂದ ಬಹುಗುಣಗಳ ಪಪ್ಪಾಯದ ಪ್ರಯೋಜನ ಹೇಗೆ, ಬೇಸಿಗೆಯಲ್ಲಿ ಇದು ಹೇಗೆ ನೆರವಾಗುತ್ತದೆಂಬುದನ್ನು ತಿಳಿದುಕೊಳ್ಳೋಣ.

ಸೂರ್ಯನ ಕಿರಣಗಳಿಂದ ಚರ್ಮದ ಭಾಗಗಳು ಕಪ್ಪಾಗಿದ್ದಲ್ಲಿ ಪಪ್ಪಾಯದ ಪ್ಯಾಕ್ ಮಾಡಿ ಬಳಸುವುದು ಸಹಕಾರಿ. ಅಲ್ಲದೆ ನಿಮಿತ ಪ್ರಮಾಣದಲ್ಲಿ ಪ್ರತಿನಿತ್ಯ ಸೇವಿಸುವುದರಿಂದ ಚರ್ಮದ ಆರೋಗ್ಯವನ್ನು ಉತ್ತಮ ಮಟ್ಟದಲ್ಲಿ ಕಾಯ್ದುಕೊಳ್ಳಲು ಸಹಾಯವಾಗುತ್ತದೆ. ಸ್ಕಿನ್ ಟ್ಯಾನ್ ಸಹ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಪಪ್ಪಾಯ ಸೇವನೆಯು ಹೃದಯಸಂಬಂಧಿತ ಸಮಸ್ಯೆಗಳ ನಿರ್ವಹಣೆಗೆ, ಮಧುಮೇಹ ಬರುವಂತಹ ಸಾಧ್ಯತೆಯನ್ನು ಕಡಿಮೆ ಮಾಡಲು, ಕ್ಯಾನ್ಸರ್ನಿಂದ ನಮ್ಮನ್ನು ದೂರ ಇರಿಸಲು, ಜೀರ್ಣಕ್ರಿಯೆಯನ್ನು ವೃದ್ಧಿಸಲು, ದೇಹದ ಭಾಗಗಳಿಗೆ ಗಾಯವೇನಾದರೂ ಆಗಿದ್ದಲ್ಲಿ ಅದು ವೇಗವಾಗಿ ಗುಣವಾಗುವಂತೆ ಮಾಡಲು ಸಹಕಾರಿ.

ಇದು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಷಿಯಂ ಹೊಂದಿರುತ್ತದೆ. ಆದ್ದರಿಂದ ರಕ್ತನಾಳಗಳ ಆರೋಗ್ಯಕ್ಕೆ ಉತ್ತಮ. ತನ್ಮೂಲಕ ಅಧಿಕ ರಕ್ತದೊತ್ತಡ ನಿರ್ವಹಣೆಗೆ, ತನ್ಮೂಲಕ ಹೃದಯದ ಆರೋಗ್ಯಕ್ಕೆ ನೆರವಾಗುತ್ತದೆ.

ಪಪ್ಪಾಯವು ಉತ್ತಮ ಪ್ರಮಾಣದಲ್ಲಿ ವಿಟಮಿನ್ ಸಿ ಯನ್ನು ಹೊಂದಿದೆ. ಇದು ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ಬೇಕಾದ ಸವಲತ್ತನ್ನು (ಕೊಲ್ಲಾಜನ್ ರಚನೆಗೆ ಸಹಕರಿಸುತ್ತದೆ.) ಮಾಡಿಕೊಡುವುದಷ್ಟೇ ಅಲ್ಲದೆ ಚರ್ಮದ ಕೋಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಹೊಳಪಿನಿಂದ ಕೂಡಿದ ಕೂದಲು ಮತ್ತು ತ್ವಚೆ ನಮ್ಮದಾಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos