ಅಮೆರಿಕ ಅಧ್ಯಕ್ಷ ಇಂದು ಭಾರತಕ್ಕೆ ಆಗಮನ

ಅಮೆರಿಕ ಅಧ್ಯಕ್ಷ ಇಂದು ಭಾರತಕ್ಕೆ ಆಗಮನ

ಅಹಮದಾಬಾದ್, ಫೆ. 24: ಇಂದು ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಆಗಮಿಸಲಿದ್ದು, ಟ್ರಂಪ್ ಭವ್ಯ ಸ್ವಾಗತಕ್ಕೆ ವೇದಿಕೆ ಸಜ್ಜಾಗಿದೆ. ಅಲ್ಲದೇ ಅಹಮದಾಬಾದ್, ಆಗ್ರಾ, ಹೊಸದಿಲ್ಲಿಯಲ್ಲಿ ಭಾರಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಇಂದು ರಾತ್ರಿ ಟ್ರಂಪ್ ಉಳಿದುಕೊಳ್ಳಲಿರುವ ದಿಲ್ಲಿಯ ಮೌರ್ಯ ಹೋಟೆಲ್ ಅಕ್ಷರಶಃ ಏಳುಸುತ್ತಿನ ಕೋಟೆಯಾಗಿ ಮಾರ್ಪಟ್ಟಿದೆ.

ಇಂದು ಹಾಗೂ ನಾಳೆ ಭಾರತ ಪ್ರವಾಸದಲ್ಲಿರುವ ಟ್ರಂಪ್ ಬೆಳಗ್ಗೆ 11.40ಕ್ಕೆ ಅಹಮದಾಬಾದ್ ಏರ್ಪೋರ್ಟ್ಗೆ ಆಗಮಿಸಲಿದ್ದಾರೆ.

ಅಲ್ಲಿಂದ ಮೊಟೆರಾ ಸ್ಟೇಡಿಯಂವರೆಗೆ 22 ಕಿ.ಮೀ ರೋಡ್ ಶೋ ಮೂಲಕ ಸಾಗಿ ಸ್ಟೇಡಿಯಂ ಉದ್ಘಾಟನೆ, ‘ನಮಸ್ತೇ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಭಾರತದ ನಂತರ ಸಬರಮತಿ ಆಶ್ರಮಕ್ಕೆ ಭೇಟಿ ಕೊಡುವ ಸಾಧ್ಯತೆ ಇದ್ದು, ಸಂಜೆ 4.30ರ ಸುಮಾರಿಗೆ ಆಗ್ರಾದ ತಾಜ್ ಮಹಲ್ಗೆ ಭೇಟಿ ನೀಡಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos