ಅನರ್ಹರ ವಿರುದ್ಧ ಉಮ್ಮಾಶ್ರೀ ವಾಗ್ದಾಳಿ

ಅನರ್ಹರ ವಿರುದ್ಧ ಉಮ್ಮಾಶ್ರೀ ವಾಗ್ದಾಳಿ

ಬೆಳಗಾವಿ, ನ 29 : ಜನರನ್ನು ಆಳಲು ನೀವು ಅಯೋಗ್ಯರು, ಅನರ್ಹರು ಮತ್ತು ನಾಲಾಯಕರು ಎಂದು ಮಾಜಿ ಸಚಿವೆ ಉಮಾಶ್ರೀ, ಅನರ್ಹ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಗೋಕಾಕ್ ಕ್ಷೇತ್ರದ ಮಲ್ಲಾಪುರ ಪಿ.ಜಿ. ಉಪಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಜನಪ್ರತಿನಿಧಿಯಾಗಲು ಇವರು ಯೋಗ್ಯರಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತೀರ್ಮಾನ ಮಾಡಿದ್ದಾರೆ. ಸುಪ್ರೀಂಕೋರ್ಟ್ ಸಹ ರಮೇಶ್ ಕುಮಾರ್ ತೀರ್ಪು ಸರಿ ಇದೆ ಎಂದಿದೆ. ಈಗ ಜನತಾ ನ್ಯಾಯಾಲಯ ತೀರ್ಪು ನೀಡಬೇಕಾಗಿದೆ ಎಂದರು.
ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕುರಿತು ಬಡವರ ತಲೆಯ ಮೇಲೆ ಹೊಡೆದವರ ಜತೆ ಹೋಗಿದಿರಲ್ಲ ರಮೇಶ್ ಅಣ್ಣಾ… ನಾನಿದನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ನಿಜವಾಗಿಯು ಬಿಜೆಪಿ ನಾಯಕರು ಅನರ್ಹರು ಹಾಗೂ ಅಸಮರ್ಥರು. ಅಂತಹ ಪಕ್ಷಕ್ಕೆ ಹೋಗಿ ನೀವು ಅನರ್ಹರು ಅನಿಸಿಕೊಂಡಿರಲ್ಲ ಎಂದು ಕುಟುಕಿದರು.

ಫ್ರೆಶ್ ನ್ಯೂಸ್

Latest Posts

Featured Videos