ಆಸ್ಪತ್ರೆ ಸಿಬ್ಬಂದಿಗೆ ಸಮವಸ್ತ್ರ ತಯಾರಿಕೆ

ಆಸ್ಪತ್ರೆ ಸಿಬ್ಬಂದಿಗೆ ಸಮವಸ್ತ್ರ ತಯಾರಿಕೆ

ಬೊಮ್ಮನಹಳ್ಳಿ, ಮಾ. 27: ಕೊರೋನಾ ಸೋಂಕು ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಹಗಲಿರುಳು ತಮ್ಮ ಜೀವವನ್ನೇ ಪಣವಾಗಿಟ್ಟಿರುವ ವೈದ್ಯರುಗಳು, ದಾದಿಗಳು, ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ಸುರಕ್ಷತಾ ಸಮವಸ್ತ್ರವನ್ನು ಬೊಮ್ಮನಹಳ್ಳಿ ಗಾರ್ಮೆಂಟ್ಸ್ ನಲ್ಲಿ ತಯಾರಿಸಲು ಶಾಸಕ ಸತೀಶ್ ರೆಡ್ಡಿ ಮುಂದಾಗಿದ್ದಾರೆ.

ಇಂದು ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೋನಾ ಸೋಂಕು ಹರಡದಂತೆ ಕೇಂದ್ರ ಸರ್ಕಾರ ಲಾಕ್‌ಡೌನ್ ಮಾಡಿದ್ದು, ಗಾರ್ಮೆಂಟ್ಸ್ ಕಾರ್ಖಾನೆಗಳು ಸ್ಥಗಿತಗೊಂಡಿವೆ. ಆದರೆ, ನಮ್ಮಗಳ ಸುರಕ್ಷತೆಗಾಗಿ ಹಗಲಿರುಳೆನ್ನದೆ ಸೈನಿಕರಂತೆ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆ ಸಿಬ್ಬಂದಿಗಳ ಸುರಕ್ಷತೆ ಕಾಪಾಡುವುದು ಜನಪ್ರತಿನಿಧಿಯಾದ ನನ್ನ ಆದ್ಯ ಕರ್ತವ್ಯವೆಂದು ಸತೀಶ್ ರೆಡ್ಡಿ ನುಡಿದರು. ಇಂದು ಬೊಮ್ಮನಹಳ್ಳಿಯಲ್ಲಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಉದ್ಯೋಗಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾ ಸುರಕ್ಷತಾ ಸಮವಸ್ತ್ರದ ತಯಾರಿಕೆಯಲ್ಲಿ ಶಾಸಕರು ಪಾಲ್ಗೊಂಡರು.

ಗಾರ್ಮೆಂಟ್ಸ್ ಮಾಲೀಕರುಗಳ ಸಮವಸ್ತ್ರ ತಯಾರಿಕೆಗೆ ಸಹಕರಿಸುವಂತೆ ಶಾಸಕರು ಮನವೊಲಿಸಿರುವುದು ಶ್ಲಾಘಾನೀಯವಾದುದು.

ಅನಗತ್ಯವಾಗಿ ಜನತೆ ರಸ್ತೆಗಳಲ್ಲಿ ತಿರುಗಾಡದಂತೆ ಮನವಿ ಮಾಡಿದರು. ಇದೇ ವೇಳೆ ಅನಗತ್ಯವಾಗಿ ಜನತೆ ರಸ್ತೆಗಳಲ್ಲಿ ಓಡಾಡಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದೆಂದು ನುಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos