ಉದ್ಧವ್‌ ಅಯೋಧ್ಯೆ ಭೇಟಿಯಲ್ಲಿ ಮತ ಧ್ರುವೀಕರಣ: ಕಾಂಗ್ರೆಸ್‌ ಟೀಕೆ

ಉದ್ಧವ್‌ ಅಯೋಧ್ಯೆ ಭೇಟಿಯಲ್ಲಿ ಮತ ಧ್ರುವೀಕರಣ: ಕಾಂಗ್ರೆಸ್‌ ಟೀಕೆ

ಉದ್ಧವ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಲಿರುವುದನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್‌ ಪಕ್ಷ, “ಉದ್ಧವ್‌ ಅಯೋಧ್ಯೆ ಭೇಟಿ ಮತ ಧ್ರುವೀಕರಣದ ಹುನ್ನಾರ ಹೊಂದಿದೆಯೇ ವಿನಾ ಆ ಭೇಟಿಯಲ್ಲಿ ಬೇರೆ ಯಾವುದೇ ಅರ್ಥ ಇಲ್ಲ” ಎಂದು ಹೇಳಿದೆ.

“ಉದ್ಧವ್‌ ಠಾಕ್ರೆ ಅವರ ಅಯೋಧ್ಯೆ ಭೇಟಿಯಲ್ಲಿ ಯಾವುದೇ ಅರ್ಥ ಇಲ್ಲ. ಐದು ರಾಜ್ಯಗಳ ಚುನಾವಣೆ ಎದುರಾಗಿರುವ ಕಾರಣ ಅವರ ಈ ಭೇಟಿಯಲ್ಲಿ ಮತ ಧ್ರುವೀಕರಣದ ಹುನ್ನಾರ ಇದೆ ಎಂಬುದನ್ನು ಜನರು ಅರಿತಿದ್ದಾರೆ; ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರವೇ ಉದ್ಧವ್‌ ಈ ಸಂದರ್ಭದಲ್ಲಿ ರಾಮ ಮಂದಿರ ವಿಷಯವನ್ನು ಎತ್ತುತಿದ್ದಾರೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಚವಾಣ ಟೀಕಿಸಿದ್ದಾರೆ.

ಭಾರತೀಯ ಜನತಾ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಕ್‌ ದಾಳಿ ನಡೆಸಿದ್ದ ಠಾಕ್ರೆ, 2014ರಲ್ಲಿ ಇದ್ದಂತೆ ಈಗ ದೇಶದಲ್ಲಿ ಯಾವುದೇ ಅಲೆ ಇಲ್ಲ ಎಂದು ಹೇಳಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos