ಮಾತನಾಡಿದರೆ ದೇಶದ್ರೋಹ ಪಟ್ಟ ಕಟ್ತಾರೆ; ಆರೋಪ

ಮಾತನಾಡಿದರೆ ದೇಶದ್ರೋಹ ಪಟ್ಟ ಕಟ್ತಾರೆ; ಆರೋಪ

ಚಾಮರಾಜನಗರ,ಜ.11: ರಾಜ್ಯದಲ್ಲಿ ಇತಿಹಾಸದಲ್ಲಿ ಕಂಡರಿಯದ ಪ್ರವಾಹ ಬಂದು ಹೋದ್ರು ಕೂಡ ಎಷ್ಟು ಪರಿಹಾರ ಬಂದಿದೆ ಎಂದು ಲೆಕ್ಕ ಕೊಡೋರು ಇಲ್ಲ ಲೆಕ್ಕ ಕೇಳೋರು ಇಲ್ಲ. ಇಂದು ದೇಶದಲ್ಲಿ ಮುಕ್ತವಾಗಿ ಮಾತನಾಡುವ ವಾತಾವರಣ ಇಲ್ಲವಾಗಿದ್ದು, ಮಾತನಾಡಿದರೆ, ದೇಶ ದ್ರೋಹ ಪಟ್ಟ ಕಟ್ತಾರೆ ಎಂದು ಕೃಷ್ಣ ಭೈರೇಗೌಡ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಕಾರ್ಯಕ್ರಮಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಂತ್ರಿಗಳಿಲ್ಲದೇ ರಾಜ್ಯದ ಅಭಿವೃದ್ಧಿ ತಾನಾಗಿ ತಾನಾಗಿಯೇ ಆಗುತ್ತಾ? ಹಾಗಾದರೆ, ಸಂಪುಟ ವಿಸ್ಥರಣೆ ಯಾಕ್ ಮಾಡ್ಬೇಕು ಎಂಎಲ್ಎ, ಮಂತ್ರಿಗಳು ಅಂಥ ಇರೋದು ಏಕೆ? ಒಬ್ಬ ಮುಖ್ಯಮಂತ್ರಿಗಳೇ ಅಧಿಕಾರಿಗಳನ್ನಿಟ್ಟುಕೊಂಡು ಮಾಡಲಿ ಬಿಡಿಲಿ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ರಾಜ್ಯದಲ್ಲಿ ಇತಿಹಾಸದಲ್ಲಿ ಕಂಡರಿಯದ ಪ್ರವಾಹ ಬಂದು ಹೋದ್ರು ಕೂಡ ಎಷ್ಟು ಪರಿಹಾರ ಬಂದಿದೆ ಎಂದು ಲೆಕ್ಕ ಕೊಡೋರು ಇಲ್ಲ ಲೆಕ್ಕ ಕೇಳೋರು ಇಲ್ಲ. ಇವತ್ತು ದೇಶದಲ್ಲಿ ಮುಕ್ತವಾಗಿ ಮಾತನಾಡುವ ವಾತಾವರಣ ಇಲ್ಲ. ಮಾತನಾಡಿದರೆ, ದೇಶ ದ್ರೋಹ ಪಟ್ಟ ಕಟ್ತಾರೆ ಎಂದು ಕೃಷ್ಣ ಭೈರೇಗೌಡ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಸ್ತತ ದಿನಗಳಲ್ಲಿ ಜನರಿಗೆ ಉದ್ಯೋಗ ಸಿಗ್ತಾ ಇಲ್ಲ. ದೇಶದಲ್ಲಿ ಇವತ್ತು ಯುವಕರನ್ನ ಪ್ರಚೋದನೆ ಮಾಡಿ ವೋಟನ್ನ ಹಾಕಿಸಿಕೊಂಡು, ಉದ್ಯೋಗ ಇಲ್ದೆ ಬೀದಿ ಪಾಲಾಗಿದ್ದಾರೆ. ಇಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡೋಕ್ಕಾಗಿಲ್ಲ. ಜನಸಾಮಾನ್ಯರ ಸಮಸ್ಯೆ ಪರಿಹಾರ ಮಾಡೋಕ್ಕಾಗಲ್ಲ. ನಿಜವಾದ ಹೊಟ್ಟೆಪಾಡಿನ ಸಮಸ್ಯೆಗಳನ್ನು ಮುಚ್ಚಾಕಿ, ಭಾವನಾತ್ಮಕ ಪ್ರಚೋದನಾಕಾರಿ ಉನ್ನಾರ ನಡೆಸುತ್ತಿದ್ದೀರಿ ಎಂದು ಮಾಜಿ ಸಚಿವರು ಹರಿಹಾಯ್ದರು.

ನಮ್ಮ ಗಮನವನ್ನೆಲ್ಲ ದಾರಿ ತಪ್ಪಿಸುವುದಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ಕಾಯ್ದೆಗಳನ್ನ ತಂದಿದ್ದಾರೆ. ಸಿಎಎ, ಎನ್ಆರ್​ಸಿ ಅಂತ ಬೆಟ್ಟ ಹಗೆದು ಇಲಿ ಹಿಡಿಯೋ ಕೆಲಸ ಮಾಡ್ತಾ ಇದ್ದಾರೆ ಎಂದು ಕೃಷ್ಣ ಬೈರೇಗೌಡ ಅವರು ವಾಗ್ದಾಳಿ ನಡೆಸಿದರು.

ಫ್ರೆಶ್ ನ್ಯೂಸ್

Latest Posts

Featured Videos