ಪ್ರವಾಸಿಗರ ಕಡಲಾಳದ ಸ್ಕೂಬಾ ಡೈವಿಂಗ್

ಪ್ರವಾಸಿಗರ ಕಡಲಾಳದ ಸ್ಕೂಬಾ ಡೈವಿಂಗ್

ಕಾರವಾರ , ನ.29 : ಕಡಲಾಳದ ವಿಸ್ಮಯ ನೋಡಬೇಕೆಂದರೇ ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಈ ವಿಸ್ಮಯ ಜಗತ್ತನ್ನು ನೋಡಲು ವಿದೇಶಕ್ಕೂ ಅಥವಾ ಅಂಡಮಾನ್ ನಿಕೋಬಾರ್ ಗೆ ತೆರಳಿ ಸಾವಿರಾರು ರೂ. ವ್ಯಯಿಸಿ ಕಣ್ತುಂಬಿಕೊಳ್ಳಬೇಕಿತ್ತು. ಆದರೆ ಈಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ನೇತ್ರಾಣಿ ಗುಡ್ಡದ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಗೆ ಅವಕಾಶ ನೀಡಲಾಗಿದೆ.
ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಸ್ಕೂಬಾ ಡೈವ್ ಗೆ ಕಳೆದ ಒಂದು ವರ್ಷಗಳಿಂದ ಅವಕಾಶ ಮಾಡಿಕೊಟ್ಟಿದ್ದು, ಮೊದಲ ಬಾರಿಗೆ ಅಂತರಾಷ್ಟ್ರೀಯ ಸ್ಕೂಬಾ ಡೈವ್ ಫೆಸ್ಟಿವಲ್ ನಡೆಯಿತು. ಎರಡು ದಿನಗಳಿಂದ ದೇಶ ವಿದೇಶದ 150 ಸ್ಕೂಬಾ ಡೈವರ್ಸ್ ಗಳು ಸಮುದ್ರದಾಳದಲ್ಲಿ ಇಳಿದು ಎಂಜಾಯ್ ಮಾಡಿದರು.
ಏನಿದು ಸ್ಕೂಬಾ ಡೈವಿಂಗ್?
ಆಮ್ಲಜನಕ ಸಿಲಿಂಡರನ್ನು ಹೆಗಲಿಗೆ ಕಟ್ಟಿಕೊಂಡು ನೀರಿಗೆ ಧುಮುಕಿ ಕಡಲಾಳದ ಜಲಚರಗಳ ವೀಕ್ಷಣೆ ಮಾಡುವುದು ಸ್ಕೂಬಾ ಡೈವಿಂಗ್ ಆಗಿದೆ. ಮುರಡೇಶ್ವರದ ನೇತ್ರಾಣಿಯಲ್ಲಿ 2007 ರಿಂದಲೇ ಸ್ಕೂಬಾ ಡೈವಿಂಗ್ ನಡೆಯುತ್ತಿದೆ. ಆದರೆ, ಇದು ಪ್ರವಾಸಿಗರಿಗೆ ತೆರೆದುಕೊಂಡಿರಲಿಲ್ಲ. ಹೆಚ್ಚು ಪ್ರಚಾರವು ಆಗಿರಲಿಲ್ಲ. ಕೆಲವು ಕಡಲ ಜೀವ ವಿಜ್ಞಾನಿಗಳು ಮಾತ್ರ ಇಲ್ಲಿಗೆ ಬಂದು ಈ ಕಾರ್ಯ ನಡೆಸುತ್ತಿದ್ದರು. ಆದರೆ 2017 ರಲ್ಲಿ ಅಧಿಕೃತವಾಗಿ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಾರ್ವಜನಿಕರಿಗೆ ಸ್ಕೂಬಾ ಡೈವಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಫ್ರೆಶ್ ನ್ಯೂಸ್

Latest Posts

Featured Videos