ಅನುಕಂಪವೇ ಮತವಾಗಿ ಪರಿವರ್ತನೆ

ಅನುಕಂಪವೇ ಮತವಾಗಿ ಪರಿವರ್ತನೆ

ಶಿರಾ: ಅಮ್ಮಾಜಮ್ಮನವರ ಮೇಲೆ ಜನರಿಗೆ ಅನುಕಂಪವೇ ಮತವಾಗಿ ಪರಿವರ್ತನೆ ಮಾಡಿ ಹೆಚ್ಚು ಮತ ಕೊಡಿಸುವ ಜವಾಬ್ದಾರಿ ಹೊಂದಿದ್ದೇನೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಆಡಳಿತ ಅವಧಿಯಲ್ಲಿ ಶಿರಾ ತಾಲೂಕಿನ ರೈತರ ೮೭.ಕೋಟಿ ರೂಪಾಯಿ ಸಾಲಮನ್ನಾ ಮಾಡಿರುವ ಋಣ ಜನ ಯಾವತ್ತು ಮರೆಯುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಶಿರಾ ತಾಲೂಕಿನ ಲಕ್ಕನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ದಿವಂಗತ ಸತ್ಯನಾರಾಯಣರವರ ಶಾಸಕರಾಗಿದ್ದ ವೇಳೆ ಸಾವಿರಾರು ರೈತರಿಗೆ ಗೋಮಾಳ ಜಮೀನು ಮಂಜೂರು ಮಾಡಿದ್ದಾರೆ. ಶಿರಾ ಆಭಿವೃದ್ಧಿಗೆ ಅವರದೇ ಹಲವಾರು ರೀತಿ ಕೊಡಿಗೆ ನೀಡಿದ್ದಾರೆ. ಇನ್ನೂ ಉಳಿದ ಎರಡುವರೆ ವರ್ಷದ ಕಾಲವಧಿ ಸೌಮ್ಯ ಸ್ವಭಾವದ ಅಮ್ಮಾಜಮ್ಮನವರಿಗೆ ನೀಡಿ ಶಿರಾ ಕ್ಷೇತ್ರದಲ್ಲಿ ಮಹಿಳೆಯರ ಪರ ಧ್ವನಿಗೆ ಶಕ್ತಿ ನೀಡುವಂತ ಕೆಲಸ ಮತದಾರ ಮಾಡಲಿದ್ದು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದರು.
ಗ್ರಾಮಾಂತರ ಶಾಸಕ ಗೌರಿಶಂಕರ್ ಮಾತನಾಡಿ ಬಿಜೆಪಿ ಪಕ್ಷದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದರು ಲಕ್ಷಾಂತರ ಯುವಕರಿಗೆ ಉದ್ಯೋಗ ಸೃಷ್ಠಿ ಮಾಡುತ್ತೆವೆ ಅಂತ ಅದರೇ ಅದಕ್ಕೆ÷ ವಿರುದ್ದ ಎಂಬಂತೆ ಲಕ್ಷಾಂತರ ಯುವಕರು ಉದ್ಯೋಗ ಕಳೆದು ಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಭ್ರಷ್ಟಾಚಾರದಿಂದ ಕೂಡಿಟ್ಟ ಹಣವನ್ನು ಈ ಚುನಾವಣೆಯಲ್ಲಿ ಹಂಚಿ ಮೋಸ ಮಾಡುತ್ತಾರೆ. ಅವರ ಹಣ ತಗೊಳ್ಳಿ ಅದ್ರೇ ಓಟು ಮಾತ್ರ, ಅಣ್ಣನ ನೋಟು ಅಕ್ಕನಿಗೆ ಓಟು ಎಂಬುವಂತೆ ಇರಲಿ. ಸ್ವಾಭಿಮಾನಿ ಹೆಣ್ಣು ಮಕ್ಕಳು ಈ ಕ್ಷೇತ್ರದಲ್ಲಿ ಮಹಿಳೆಯ ಪರ ಮತ ಚಲಾಯಿಸಲಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos