ಬಂಗಾಳಕ್ಕೆ ತಲುಪಿದ ಟ್ರೈನ್

ಬಂಗಾಳಕ್ಕೆ ತಲುಪಿದ ಟ್ರೈನ್

ಪಶ್ಚಿಮ ಬಂಗಾಳ, ಮೇ 12-  ಕೊರೊನಾ ಬಂದಿರುವ  ಹಿನ್ನಲೆ , ವಲಸೆ ಕಾರ್ಮಿಕರು, ವಿದ್ಯಾರ್ಥಿಗಳೂ ಸೇರಿದಂತೆ ಬೆಂಗಳೂರಿನಿಂದ 1,200ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು ಇಂದು ಬೆಳಗ್ಗೆ ಪಶ್ಚಿಮ ಬಂಗಾಳದ ಬಂಕುರಾ ತಲುಪಿದೆ ಎಂದು ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದರು.

ಬೆಂಗಳೂರಿನಿಂದ ಮೇ 10ರಂದು ಪ್ರಯಾಣ ಬೆಳಸಿದ 22 ಭೋಗಿಗಳ ವಿಶೇಷ ರೈಲು ಎರಡು ದಿನಗಳ ನಂತರ ಬಂಕುರಾವನ್ನು ಸುರಕ್ಷಿತವಾಗಿ ತಲುಪಿದೆ ಎಂದರು. ಬಂಕುರಾ ರೈಲು ನಿಲ್ದಾಣ ತಲುಪಿದ ಎಲ್ಲ ಪ್ರಯಾಣಿಕರನ್ನು ಕೊರೊನಾ ರೋಗ ಲಕ್ಷಣಗಳ ಪತ್ತೆಯಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಫಲಿತಾಂಶದ ನಂತರ ಅವರವರ ಮನೆಗಳನ್ನು ತಲುಪಲು ಪಶ್ಚಿಮ ಬಂಗಾಳ ಸರ್ಕಾರ ಬಸ್‍ಗಳ ವ್ಯವಸ್ಥೆ ಮಾಡಲಿದೆ.

ಫ್ರೆಶ್ ನ್ಯೂಸ್

Latest Posts

Featured Videos