ಕಾಲರ್ ಹಿಡಿದು ಎಳೆದಾಡಿದ ಟ್ರಾಫಿಕ್ ಪೊಲೀಸ್

ಕಾಲರ್ ಹಿಡಿದು ಎಳೆದಾಡಿದ ಟ್ರಾಫಿಕ್ ಪೊಲೀಸ್

ಮಂಗಳೂರು, ಅ.31 : ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಪ್ರಕಾರ ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನನಿಗೆ ದಂಡ ಹಾಕುವುದನ್ನು ಬಿಟ್ಟು ಟ್ರಾಫಿಕ್ ಪೊಲೀಸರು ದುರ್ವರ್ತನೆ ತೋರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಬೈಕಿನಲ್ಲಿ ಹಿಂಬದಿ ಸವಾರರೊಬ್ಬರು ಹೆಲ್ಮೆಟ್ ಹಾಕದೆ ಪ್ರಯಾಣಿಸುತ್ತಿದ್ದರು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಎಎಸ್ಐ ಬಾಲಕೃಷ್ಣ ಬೈಕ್ ಸವಾರರನ್ನು ನಿಲ್ಲಿಸಿದ್ದಾರೆ. ಬಳಿಕ ಯುವಕನ ಶರ್ಟ್ ಕಾಲರ್ ಹಿಡಿದು ತಳ್ಳುತ್ತಾ ಎಳೆದಾಡಿದ್ದಾರೆ.
ಈ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್ ಪೇಟೆಯಲ್ಲಿ ನಡೆದಿದ್ದು, ಈ ದೃಶ್ಯವನ್ನು ಮತ್ತೊಬ್ಬ ಬೈಕ್ ಸವಾರ ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಸವಾರ ತನ್ನ ಮೇಲೆ ಕೇಸು ದಾಖಲಿಸಿ ಎಂದು ಗೋಗರೆಯುತ್ತಿದ್ದರೂ, ಟ್ರಾಫಿಕ್ ಪೊಲೀಸ್ ಕಾಲರ್ ಹಿಡಿದು ತಳ್ಳಾಡಿದ್ದಾರೆ. ರೆಕಾರ್ಡ್ ತೋರಿಸುವಂತೆ ದರ್ಪ ತೋರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos