ಹರಿದ ರಾಷ್ಟ್ರಧ್ವಜ ಹಾರಾಟ; ಜನರ ಆಕ್ರೋಶ

ಹರಿದ ರಾಷ್ಟ್ರಧ್ವಜ ಹಾರಾಟ; ಜನರ ಆಕ್ರೋಶ

ಹುಬ್ಬಳ್ಳಿ, ಜ. 23: ಹರಿದ, ಕೊಳಕಾದ, ಹಾಳಾದ ರಾಷ್ಟ್ರಧ್ವಜ ಹಾರಿಸುವದು ಅಪರಾಧ. ರಾಷ್ಟ್ರ ಧ್ವಜಕ್ಕೆ ತನ್ನದೇಯಾದ ಗೌರವ ಘನತೆ ಇದೆ.‌ ಆದರೆ ಹುಬ್ಬಳ್ಳಿಯ ಮಿನಿವಿಧಾನ ಸೌಧದ ಮೇಲೆ ಹರಿದ ದ್ವಜ ಹಾರಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಹೃದಯ ಭಾಗದಲ್ಲಿರುವ ಮಿನಿವಿಧಾನ ಸೌಧದಲ್ಲಿ ಹತ್ತಾರು ಕಚೇರಿಗಳು ಕಾರ್ಯನಿರ್ವಹಿಸುತ್ತವೆ. ಹುಬ್ಬಳ್ಳಿ ಗ್ರಾಮೀಣ ಹಾಗೂ ಶಹರ ತಹಶಿಲ್ದಾರರ ಕಚೇರಿಗಳು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ, ವಾರ್ತಾ ಇಲಾಖೆ ಸೇರಿದಂತೆ ಹಲವು ಕಚೇರಿಗಳಿವೆ. ನಿತ್ಯ ಸಾವಿರಾರು ಜನರು ಇಲ್ಲಿ ಕೆಲಸದ ನಿಮಿತ್ತ ಬರುತ್ತಾರೆ. ಇಷ್ಟಿದರೂ ರಾಷ್ಟ್ರ ಧ್ವಜದ ಬಗ್ಗೆ ಕಿಂಚಿತ್ತೂ ಗೌರವ ಇಲ್ಲದಂಗಾಗಿದೆ‌. ನೋಡಿಯೂ ನೋಡದಂತೆ ಓಡಾಡುವ ಅಧಿಕಾರಿಗಳು ಧ್ವಜ ಬದಲಾಯಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos