ಟಾಲಿವುಡ್ ನ ಹಾಸ್ಯ ನಟ ಆಸ್ಪತ್ರೆಗೆ ದಾಖಲು!

ಟಾಲಿವುಡ್ ನ ಹಾಸ್ಯ ನಟ ಆಸ್ಪತ್ರೆಗೆ ದಾಖಲು!

ಹೈದರಾಬಾದ್, ಜ. 24: ಟಾಲಿವುಡ್ ಖ್ಯಾತ ಕಾಮಿಡಿ ಕಲಾವಿದ ತಮ್ಮದೇ ಆದ ವಿಭಿನ್ನ ರೀತಿಯ ಹಾಸ್ಯ ನಟನೆಯಿಂದ ಅಭಿಮಾನಿಗಳ ಮನಗೆದ್ದಿರುವ ನಟ ಸುನೀಲ್ ವರ್ಮಾರವರು ಇತ್ತೀಚೆಗೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ದಿನಗಳಿಂದ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಈ ವೇಳೆ ತೆಗೆದುಕೊಳ್ಳುತ್ತಿದ್ದ ಆ್ಯಂಟಿ ಬಯೋಟಿಕ್ಸ್ ಡೋಸ್ ಹೆಚ್ಚಾದ ಕಾರಣ ಶ್ವಾಸಕೋಶದ ಸೊಂಕು ಆಗಿದೆ ಎಂದು ವೈದ್ಯರು ಹೇಳಿದ್ದಾರೆ.

ಕುಟುಂಬಸ್ತರು ಹೈದರಾಬಾದ್ನ ಚಿಬೌಲಿ ಆಸ್ಪತ್ರೆಗೆ ಸುನೀಲ್ ಅವರನ್ನು ದಾಖಲಿಸಿದ್ದಾರೆ. ಶ್ವಾಸಕೋಶ ತೊಂದರೆ ಗೊತ್ತಾದರೂ ಸುನೀಲ್, ಸೈಡ್ ಎಫೆಕ್ಟ್ ಬೀರುತ್ತಿದ್ದ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿರಲಿಲ್ಲ. ಸದ್ಯಕ್ಕೆ ವೈದ್ಯರು ಸೋಂಕು ಹರಡದಂತೆ ತಡೆದಿದ್ದಾರೆ. ಸುನೀಲ್ ಇನ್ನು 7-10 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos