ಗುಜರಿ ಬಸ್‌ನಲ್ಲಿ ಶೌಚಗೃಹ

ಗುಜರಿ ಬಸ್‌ನಲ್ಲಿ ಶೌಚಗೃಹ

ಬೆಂಗಳೂರು , ನ. 9: ಮಹಾನಗರಿ, ಮಾಯಾನಗರಿ ದಿನೇ  ದಿನೇ ಒಂದಲ್ಲಾಂದು ಕೌತುಕ ಹಾಗೂ ಅಭಿವೃದ್ಧಿಯ ದಿಕ್ಕಿನೆಡೆಗೆ ಸಾಗುತ್ತಿದೆ. ಅಂತೆಯೇ ಅನುಪಯುಕ್ತ ವಸ್ತುಗಳಿಂದ ಏನೆಲ್ಲ ಉಪಯೋಗಗಳನ್ನು ಮಾಡಿಕೊಳ್ಳ ಬಹುದೆಂಬ ಪ್ರಯೋಗಗಳ ಪಾಠ ಶಾಲೆಯಾಗುತ್ತಿದೆ ಸಿಲಿಕಾನ್ ಸಿಟಿ.

ಮಹಿಳೆಯರ ಅನುಕೂಲಕ್ಕಾಗಿ ಪ್ರತ್ಯೇಕ ಶೌಚಗೃಹಕ್ಕೆ ಮಾಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಅದಕ್ಕಾಗಿ ಲಕ್ಷಾಂತರ ರೂ. ವ್ಯಯಿಸಿಕಟ್ಟಡ ನಿರ್ಮಿಸಲಿದೆ, ಗುಜರಿಗೆ ಸೇರಬೇಕಾದ ಬಸ್‌ಗಳನ್ನು ಸಮರ್ಪಕವಾಗಿ ಬಳಸಿ ಕೊಳ್ಳಲಿದೆ. ಈ ಯೋಜನೆಗೆ ಬಿಐಎಎಲ್ ಹಣ ಹೂಡಲಿದೆ. ಮೊದಲಿಗೆ ಮೆಜೆಸ್ಟಿಕ್‌ನ ಬಸ್ ನಿಲ್ದಾಣದಲ್ಲಿ ಮಹಿಳಾ ಶೌಚಗೃಹ ನಿರ್ಮಿಸಲಾಗುತ್ತದೆ. ನಂತರ ಜಿಲ್ಲಾ ಕೇಂದ್ರಗಳಲ್ಲೂ ಅದೇ ಮಾದರಿಯ ಶೌಚಗೃಹ ನಿರ್ಮಾಣ ಕುರಿತಂತೆ ನಿರ್ಧರಿಸಲಾಗುತ್ತದೆ.

ಗುಜರಿಗೆ ಹಾಕಬೇಕಾದ ಬಸ್‌ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಕೆಎಸ್‌ಆರ್‌ಟಿಸಿ ಯೋಜನೆ ರೂಪಿಸಿದೆ. ಅದಕ್ಕೆ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಸಾಥ್ ನೀಡುತ್ತಿದೆ.

13 ಲಕ್ಷ ರೂ. ವೆಚ್ಚ:

ಒಂದು ಶೌಚಗೃಹಕ್ಕೆ 13 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ನಿರ್ವಹಣೆಗೆ ನಿಗಮದ ಮಹಿಳಾ ಸಿಬ್ಬಂದಿ ನೇಮಿಸಲಾಗುತ್ತದೆ. ಇನ್ನೆರಡು ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಐಎಎಲ್ ಅಧಿಕಾರಿಗಳ ಸಭೆ ನಡೆಯಲಿದ್ದು, ಶೌಚಗೃಹ ನಿರ್ಮಾಣ ಕುರಿತಂತೆ ಅಂತಿಮ ನಿರ್ಧಾರ ಮಾಡಲಾಗುತ್ತದೆ. ಬಸ್ ಶೌಚಗೃಹದಲ್ಲಿ ಮಹಿಳೆಯರಿಗೆ ಹಲವು ವ್ಯವಸ್ಥೆ ಅಳವಡಿಸಲಾಗುತ್ತದೆ. ಶೌಚಗೃಹದ ಹೊರ ಭಾಗದಲ್ಲಿ ಸಣ್ಣದಾದ ಕ್ಯಾಂಟೀನ್ ಸ್ಥಾಪಿಸಲಾಗುತ್ತದೆ. ವೈ-ಫೈ ವ್ಯವಸ್ಥೆ, ಆರೋಗ್ಯ ಸಂಬಂಧಿ ವಸ್ತುಗಳು, ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗುತ್ತದೆ. ಮಕ್ಕಳಿಗೆ ಹಾಲುಣಿಸುವ ಮತ್ತು ಡೈಪರ್ ಬದಲಿಸುವುದಕ್ಕಾಗಿ ಪ್ರತ್ಯೇಕ ಕೊಠಡಿಯೂ ಇರಲಿದೆ.

ವಾಟ್ಸ್ಆಪ್ ಪ್ರೇರಣೆ

ಪುಣೆಯಲ್ಲಿ ಇದೇ ಮಾದರಿಯ ಶೌಚಗೃಹ ನಿರ್ಮಿಸಲಾಗಿದೆ. ಆ ಕುರಿತ ವಿಡಿಯೋವೊಂದು ನಿಗಮದ ಎಂಡಿ ಶಿವಯೋಗಿ ಸಿ.ಕಳಸದ ಅವರಿಗೆ ವಾಟ್ಸ್ಆಪ್ ಮೂಲಕ ಬಂದಿದೆ. ಅದನ್ನು ನೋಡಿದ ಎಂಡಿ, ಅದೇ ಮಾದರಿಯ ಶೌಚಗೃಹ ನಿರ್ವಣಕ್ಕೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಿಳೆಯರ ಅನುಕೂಲಕ್ಕಾಗಿ ಪ್ರತ್ಯೇಕ ಶೌಚಗೃಹಕ್ಕೆ ಮಾಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.ಅದಕ್ಕಾಗಿ ಲಕ್ಷಾಂತರ ರೂ. ವ್ಯಯಿಸಿಕಟ್ಟಡ ನಿರ್ಮಿಸಲಿದೆ. ಗುಜರಿಗೆ ಸೇರಬೇಕಾದ ಬಸ್‌ಗಳನ್ನು ಬಳಸಿ ಕೊಳ್ಳಲಿದೆ. ಈ ಯೋಜನೆಗೆ ಬಿಐಎಎಲ್ ಹಣ ಹೂಡಲಿದೆ. ಮೊದಲಿಗೆ ಮೆಜೆಸ್ಟಿಕ್‌ನ ಬಸ್ ನಿಲ್ದಾಣದಲ್ಲಿ ಮಹಿಳಾ ಶೌಚಗೃಹ ನಿರ್ಮಿಸಲಾಗುತ್ತದೆ. ನಂತರ ಜಿಲ್ಲಾ ಕೇಂದ್ರಗಳಲ್ಲೂ ಅದೇ ಮಾದರಿಯ ಶೌಚಗೃಹ ನಿರ್ಮಾಣ ಕುರಿತಂತೆ ನಿರ್ಧರಿಸಲಾಗುತ್ತದೆ.

 

 

 

 

ಫ್ರೆಶ್ ನ್ಯೂಸ್

Latest Posts

Featured Videos