ಇಂದು ರೈತರ ದಿನಾಚರಣೆ..

ಇಂದು ರೈತರ ದಿನಾಚರಣೆ..

ಬೆಂಗಳೂರು, ಡಿ. 23: ಹಸಿದು ಉನ್ನುವುದು ಪ್ರಕೃತಿ, ಹಸಿಯದೇ ಉನ್ನುವುದು ವಿಕೃತಿ ತಾನು ಹಸಿದರೂ ಇತರರಿಗೆ ಉಣಬಡಿಸುವವನು ರೈತ. ಇಂತಹ ಶ್ರಮಜೀವಿ ಈ ನಾಡಿನ ಸ್ವಾಭಿಮಾನಿ. ಇಂತಹ ರೈತನ ದಿನಾಚರಣೆ ಎಷ್ಟೋ ಜನರಿಗೆ ಇನ್ನೂ ಗೊತ್ತೇ ಇಲ್ಲ. ಇದು ತುಂಬಾ ವಿಪರ್ಯಾಸ. ಅಂದರೆ, ಅನ್ನ ಕೊಡುವ ರೈತನನ್ನೇ ಮರೆತು ಜೀವನ ಸಾಗಿಸಿದರೆ ಇನ್ನೇಲ್ಲಿದೆ ರೈತನಿಗೆ ಗೌರವ. ರೈತ ದಿನಾಚರಣೆ ಇತಿಹಾಸ ಮತ್ತು ಹಿನ್ನೇಲೆ ತಿಳಿದು ಆತನ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ವಂದಿಸಬೇಕಿದೆ.

ರೈತನನ್ನು ನೆನೆ” ಎಂಬ ನಾಣ್ಣುಡಿಯಂತೆ ಇಂದು ನಾವೆಲ್ಲರೂ ಹೊಟ್ಟೆ ತುಂಬುವಷ್ಟು ಊಟ ಮಾಡಿ ಹಸಿವೆ ಇಲ್ಲದೆ ನಿಶ್ಚಿತೆಯಿಂದ ನಿದ್ದೆ ಮಾಡುತ್ತಿದ್ದರೆ, ಇದರ ಹಿಂದೆ ರೈತನ ಶ್ರಮ ಮತ್ತು ಬೆವರೇ ಮುಖ್ಯ ಕಾರಣ.

ರೈತನನ್ನು ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತದೆ. ಬಿತ್ತಿ, ಬೆಳೆಯುವ ರೈತ ನಿಜವಾಗಿಯೂ ಪ್ರಾಮಾಣಿಕನಾಗಿರುತ್ತಾನೆ. ಕೆಲವೊಂದು ಸಂದರ್ಭದಲ್ಲಿ ಆತನ ವೃತ್ತಿಗೆ ಸಂಬಂಧಿಸದಂತೆ ಒರಟುತನ ಆತನಲ್ಲಿ ಇದ್ದರೂ

ಮೋಸ ಮಾಡುವುದು ಬಹಳ ಕಡಿಮೆ. ಯಾಕೆಂದರೆ ಕೃಷಿ ಕೆಲಸದಲ್ಲಿ ಮೋಸ ಮಾಡಿದರೆ ನಷ್ಟವಾಗುವುದು ತನಗೆ ಎಂದು ಆತನಿಗೆ ಚೆನ್ನಾಗಿ ಗೊತ್ತಿದೆ. ತನ್ನಂತೆ ಪರರ ಎಂದು ಆತ ಬಗೆಯುತ್ತಾನೆ. ಇತರರು ತನಗೆ ಮೋಸಮಾಡಲಾರರು ಎಂಬುದು ಕೃಷಿಕರ ನಂಬಿಕೆ. ಆದರೆ ವ್ಯಾಪಾರ ಎಂಬುದು ಎಲ್ಲಾ ಕಡೆ ಸಾರ್ವತ್ರಿಕವಾಗತೊಡಗಿ ದಂತೆ ರೈತರು ನಿಧಾನವಾಗಿ ಎಲ್ಲವನ್ನೂ ಕಲಿಯತೊಡಗಿದ್ದಾರೆ. ಒಂದು ಬಾರಿ ಮೋಸ ಹೋದರೆ ಮತ್ತೆಂದಿಗೂ ಮೋಸ ಹೋಗದೇ ಇರುವುದು ರೈತರ ಜಾಯಮಾನವೂ ಹೌದು. ಆದರೆ ಈ ಒಂದು ಬಾರಿ ಮಾಡಲಾಗುವ ಮೋಸ ರೈತರನ್ನು ಸಂಪೂರ್ಣವಾಗಿ ದೆಸೆಗೆಡಿ ಸುತ್ತದೆ ಎಂಬುದೂ ಸತ್ಯ. ರೈತ ದೇಶದ ಬೆನ್ನೆಲುಬು ಮಾತ್ರವಲ್ಲದೆ ದೇಶಕ್ಕಾಗಿ ಅನೇಕ ಕೊಡುಗೆಗಳನ್ನೂ ಆತ ನೀಡುತ್ತಾನೆ.

 

ಫ್ರೆಶ್ ನ್ಯೂಸ್

Latest Posts

Featured Videos