ಇಂದು ಇಂಡೋ-ವಿಂಡೀಸ್ ಟಿ20 ಫೈಟ್

ಇಂದು ಇಂಡೋ-ವಿಂಡೀಸ್ ಟಿ20 ಫೈಟ್

ಕೇರಳ, ಡಿ. 8 : ಇತ್ತೀಚೆಗೆ ಹೈದ್ರಾಬಾದ್ನ ಉಪ್ಪಾಳ ಅಂಗಳದಲ್ಲಿ ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಖುಷಿಯಲ್ಲಿ ತೇಲಾಡುತ್ತಿರುವಾಗಲೇ ವಿರಾಟ್ ಪಡೆಗೆ ಮತ್ತೊಂದು ಸವಾಲು ಎದುರಾಗಿದೆ. ತಿರುವನಂತಪುರಂನ ಗ್ರೀನ್ಫೀಲ್ಡ್ ಅಂಗಳದಲ್ಲಿ ಎರಡನೇ ಕದನ ನಡೆಯಲಿದ್ದು ಕೊಹ್ಲಿ ಪಡೆ ಇಂದಿನ ಪಂದ್ಯವನ್ನು ಗೆದ್ದು ಸರಣಿ ಕೈ ವಶ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದೆ. ಮೊದಲ ಟಿ20 ಪಂದ್ಯ ಸೋಲಿನಿಂದ ಕೆಂಗಟ್ಟಿರುವ ಕೀರನ್ ಪೊಲಾರ್ಡ್ ನೇತೃತ್ವದ ಕೆರಿಬಿಯನ್ ತಂಡ. ಸರಣಿ ಜೀವಂತವಾಗಿರಿಸಲು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಅಲ್ಲದೆ ಮೊದಲ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳಲು ಹೊಂಚುಹಾಕಿದ್ದು, ಹೊಸ ಗೇಮ್ ಪ್ಲಾನ್ ಮೂಲಕ ಕಣಕ್ಕಿಳಿಯುತ್ತಿದ್ದಾರೆ. ಹೈದ್ರಾಬಾದ್ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ, ತಿರುವನಂತಪುರಂನಲ್ಲೂ ಗೆಲುವಿನ ನಾಗಾಲೋಟ ಮುಂದುವರಿಸುವ ಉತ್ಸಾಹದಲ್ಲಿದೆ. ಮೊದಲ ಪಂದ್ಯದಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಮತ್ತೊಮ್ಮೆ ಬಿಗ್ ಇನ್ನಿಂಗ್ಸ್ ಕಟ್ಟಬೇಕಿದೆ. ಜೊತೆಗೆ ಹೈದ್ರಾಬಾದ್ ಅಂಗಳದಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಗಿದ್ದ ಹಿಟ್ಮ್ಯಾನ್ ರೋಹಿತ್ ಬಿಗ್ ಇನ್ನಿಂಗ್ಸ್ ಕಲೆಹಾಕಬೇಕಿದೆ. ಕ್ಯಾಪ್ಟನ್ ವಿರಾಟ್ ಕೊಹ್ಲಿಯಿಂದ ಮತ್ತೆ ಮ್ಯಾಚ್ ವಿನ್ನಿಂಗ್ ಪರ್ಫಾಮನ್ಸ್ ಮೂಡಿಬಂದರೆ, ಟೀಮ್ ಇಂಡಿಯಾ ಗೆಲುವಿನ ನಗೆ ಬೀರುವುದರಲ್ಲಿ ಅನುಮಾನವೇ ಇಲ್ಲ.

ಫ್ರೆಶ್ ನ್ಯೂಸ್

Latest Posts

Featured Videos