ಇಂದು ‘ದಬಾಂಗ್’-3 ಆರ್ಭಟ..!

ಇಂದು ‘ದಬಾಂಗ್’-3 ಆರ್ಭಟ..!

ಬೆಂಗಳೂರು, ಡಿ. 20: ಸಲ್ಮಾನ್ ಖಾನ್, ಕಿಚ್ಚ ಸುದೀಪ್, ಸೋನಾಕ್ಷಿ ಸಿನ್ಹಾಅಭಿನಯದ ಬಹುಕೋಟಿ ವೆಚ್ಚದ “ದಬಂಗ್ 3” ಚಿತ್ರ ಇಂದು ಬಿಡುಗಡೆಯಾಗಿದೆ. ಬಹುನಿರೀಕ್ಷಿತ ದಬಾಂಗ್-3 ಚಿತ್ರ ಇಂದು ತೆರೆಯ ಮೇಲೆ ಅಪ್ಪಳಿಸಿದೆ. ಬಿಟೌನ್ ಭಾಯಿಜಾನ್ ಲೀಡ್ರೋಲ್ ನಲ್ಲಿ ಕಾಣಿಸಿಕೊಂಡಿರೋ ಚಿತ್ರದಲ್ಲಿ ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಇಂದು ವರ್ಲ್ಡ್ ವೈಡ್ ರಿಲೀಸ್ ಆಗಿರೋ ದಬಾಂಗ್3ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಕನ್ನಡದಲ್ಲೂ ದಬಾಂಗ್ 3 ರಿಲೀಸ್ ಆಗಿರೋದ್ರಿಂದ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹೆಚ್ಚೇ ಇತ್ತು. ಅದರಲ್ಲೂ ಕನ್ನಡಕ್ಕೆ ಸ್ವತಃ ಸಲ್ಮಾನ್ ಖಾನ್ ವಾಯ್ಸ್ ಡಬ್ ಮಾಡಿರೋದ್ರಿಂದ ಕನ್ನಡ ಸಿನಿರಸಿಕರು ಫುಲ್ ಥ್ರಿಲ್ ಆಗಿದ್ದಾರೆ. ಇಂದು ರಾಜ್ಯಾದ್ಯಂತ ದಬಾಂಗ್ 3 ಹಿಂದಿ ವರ್ಷನ್ ಜೊತೆ ಕನ್ನಡ ಅವತರಣಿಕೆ ಕೂಡ ರಿಲೀಸ್ ಆಗಿದ್ದು, ಥಿಯೇಟರ್ನಲ್ಲಿ ಸಲ್ಮಾನ್ ಹಾಗೂ ಕಿಚ್ಚನ ಎಂಟ್ರಿ ಸೀನ್ ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos