ಸರಕಾರಿ ಜಾಗ ಉಳಿಸಿಕೊಳ‍್ಳಲು ಪಣ ತೊಟ್ಟ ಗ್ರಾಮಸ್ಥರರು

ಸರಕಾರಿ ಜಾಗ ಉಳಿಸಿಕೊಳ‍್ಳಲು ಪಣ ತೊಟ್ಟ ಗ್ರಾಮಸ್ಥರರು

ಚಿಕ್ಕೋಡಿ, ಜ. 31:  ರಾಯಬಾಗ ತಾಲ್ಲೂಕಿನ ಕಂಕನವಾಡಿ ಗ್ರಾಮದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಾಗವನ್ನು ಒತ್ತುವರಿಯಾಗಿದ್ದು, ಈ ಸರ್ಕಾರಿ ಜಾಗ ಒತ್ತುವರಿಯಾಗಿ  ದಶಕಗಳೇ ಕಳೆದಿವೆ.  ಪಟ್ಟಣ ಪಂಚಾಯಿತಿ ಚೀಪ್‌ ಆಫೀಸರ್ ಕೂಡಾ ಕಟ್ಟುನಿಟ್ಟಿನ ಆದೇಶ ಕೈಗೊಳದ ಹಿನ್ನೆಲೆ ಒತ್ತುವರಿಗೆ ಕಾರಣ ಆಗಿದೆ ಎಂದು ಆರೋಪಿಸಿ ಇಂದು ಸೈನಿಕರು, ಗ್ರಾಮದ  ಜನರು ಸೇರಿ ಧ್ವನಿ ಎತ್ತಿ ಸರಕಾರಿ ಜಾಗವನ್ನು ಉಳಿಸಿಕೊಳ್ಳಲು ಪಣ ತೊಟ್ಟಿದ್ದಾರೆ. ಅಲ್ಲದೇ ಸರಕಾರದ ಅಧಿಕಾರಿಗಳಿಗೆ ತಕ್ಷಣ‌ ಒತ್ತುವರಿ ಜಾಗ ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ‌ ನೀಡಿದರು.

ಕಂಕನವಾಡಿಯ ಸೈನಿಕರು  ರಾಯಭಾಗದ ತಹಸೀಲ್ದಾರರನ್ನು ಕರೆಸಿಕೊಂಡು ಪಟ್ಟಣದ ತುಂಬ ತಿರಗಾಡಿ  ತಹಸೀಲ್ದಾರರಿಗೆ  ಗ್ರಾಮಸ್ಥರು ಮತ್ತು ಸೈನಿಕರು ಒತ್ತುವರಿಯಾದ  ಜಾಗವನ್ನು  ತೋರಿಸಿದರು.

ಪಟ್ಟಣದಲ್ಲಿ ಕಂಕಣವಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಸರಕಾರಿಯ ಜಾಗ  27 ಎಕರೆ ಒತ್ತುವರಿ ಮಾಡಲಾಗಿದೆ. ಇದನ್ನು ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಗ್ರಾಮಸ್ಥರು ಪಟ್ಟು ಹಿಡಿದರು. ಅದರಲ್ಲಿ ವಿಶೇಷ ಏನೆಂದರೆ ದಶಕಗಳಿಂದ ಪಟ್ಟಣ ಪಂಚಾಯಿತಿ ಜಾಗವನ್ನು ಒತ್ತುವರಿ ಮಾಡಿದರೂ ಯಾವೊಬ್ಬರೂ ಮಾತನಾಡುತ್ತಿರಲಿಲ್ಲ. ಕಂಕಣವಾಡಿಯ ಕೆಲ‌ವೀರ ಯೋಧರು, ಗ್ರಾಮಸ್ಥರ ನೇತೃತ್ವದಲ್ಲಿ ಮಾತುಕತೆ ನಡೆಸಿ‌ ಸರಕಾರಿ ಜಮೀನನ್ನು ಉಳಿಸಿಕೊಳುವ ಪಣ ತೊಟ್ಟಿದರು. ಅಲ್ಲದೇ ಈ ಕುರಿತಾಗಿ ಪುರಸಭೆ ಅಧಿಕಾರಿಗಳ ಗಮನಕ್ಕೆ‌ ತಂದರೂ ಕ್ಯಾರೇ ಎನ್ನದ‌ ಹಿನ್ನೆಲೆ ಇಂದು ಗ್ರಾಮಸ್ಥರು ರೊಚ್ಚಿಗೆದ್ದರು.

ಇನ್ನೂ ಸರಕಾರಿ ಜಮೀನನ್ನು ಒತ್ತುವರಿ ಮಾಡಿದ್ದನ್ನು ಉಳಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಾದ‌ ರಾಯಬಾಗ ತಹಸೀಲ್ದಾರ..ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ,  ತಲಾಟಿ ಸಹಬಾಗಿತ್ವದಲ್ಲಿ ಗ್ರಾಮಸ್ಥರ ನೇತ್ವದಲ್ಲಿ ಪಟ್ಟಣದ ಒತ್ತುವರಿ ಸ್ಥಳಗಳನ್ನು ಸಾರ್ವಜನಿಕರು ರಾಯಬಾಗ ತಹಸೀಲ್ದಾರರಿಗೆ ಪಟ್ಟಣದ ತುಂಬ ಸಂಚರಿಸಿ ಎಲ್ಲವೂ ತೋರಿಸಿದರು. ಇನ್ನೂ ಅಧಿಕಾರಿಗಳ ಹಾಗೂ ಗ್ರಾಮಸ್ಥರ ನಡುವೆ ಚಿಕ್ಕ ಚಿಕ್ಕ‌ಮಾತಿನ‌ ಚಕಮಕಿಯೂ ನಡೆಯಿತು. ಈ‌ ಮದ್ಯೆ ಪಟ್ಟಣ ಪಂಚಾಯಿತಿ ಚೀಪ್ ಆಫೀಸ್ ರ ಹಾಗೂ ತಲಾಟಿ ತುಟಿ ಪಿಟಕ್ ಅನ್ನಲಿಲ್ಲ. ಅಲ್ಲದೇ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಯಬಾಗ ತಹಸೀಲ್ದಾರ, ಶ್ರೀಕಾಂತ್ ಭಜಂತ್ರಿ, ಒತ್ತುವರಿ ಮಾಡಿದ್ದರ ಖಚಿತವಾದರೆ ಅವರ ಮೇಲೆ‌ ಸರಕಾರದ‌ ನಿಯಮಾನುಸಾರ ಕಠೀಣ ಕ್ರಮ ಕೈಗೊಳ್ಳಲಾಗುವುದು.. ಅದನ್ನು ನಾವು ಸರ್ವೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos