ಪ್ರಿಯಾಂಕಾ ಬದಲು ಚೋಪ್ರಾಗೆ ಜೈಕಾರ

ಪ್ರಿಯಾಂಕಾ ಬದಲು ಚೋಪ್ರಾಗೆ ಜೈಕಾರ

ನವದೆಹಲಿ, ಡಿ. 2: ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಬದಲು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ಜೈಕಾರ ಘೋಷಣೆ ಕೂಗುವ ಮೂಲಕ ಕಾಂಗ್ರೆಸ್ ನಾಯಕರೊಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಪಟ್ಟಕ್ಕೆ ಏರಿದ ನಂತರ ಪ್ರಿಯಾಂಕಾ ಗಾಂಧಿ ವರ್ಚಸ್ಸು ಕೂಡ ಹೆಚ್ಚಾಗಿದೆ. ಆದರೆ, ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಆದ ಒಂದು ಯಡವಟ್ಟಿನಿಂದ ಪ್ರಿಯಾಂಕಾ ಗಾಂಧಿ ಹೆಸರು ಈಗ ಟ್ರೋಲ್ ಆಗುತ್ತಿದೆ.

ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ಸುರೇಂದ್ರ ಕುಮಾರ್ ಕೈ ನಾಯಕರ ಹೆಸರುಗಳನ್ನು ಹೇಳಿ ಜೈಕಾರ ಹಾಕುತ್ತಿದ್ದರು. ಈ ವೇಳೆ ಸೋನಿಯಾ ಗಾಂಧಿ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್ ಎಂದ ನಂತರ ಪ್ರಿಯಾಂಕಾ ಗಾಂಧಿ ಎಂದು ಹೇಳುವ ಬದಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜಿಂದಾಬಾದ್ ಎಂದು ಹೇಳಿಬಿಟ್ಟಿದ್ದಾರೆ. ಬಾಯ್ತಪ್ಪಿನಿಂದಾದ ಈ ಎಡವಟ್ಟಿನಿಂದ ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕರು ಮುಜುಗರಕ್ಕೀಡಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos