ಲಕ್ಷ್ಮಣ ಸವದಿ ಅಥವಾ ವಿಜಯೇಂದ್ರ ಕಣಕ್ಕೆ

ಲಕ್ಷ್ಮಣ ಸವದಿ ಅಥವಾ ವಿಜಯೇಂದ್ರ ಕಣಕ್ಕೆ

ಬೆಂಗಳೂರು : ಬಿಜೆಪಿಯಿಂದ ನಾನು ಅಥವಾ ವಿಜಯೇಂದ್ರ ಇಬ್ಬರಲ್ಲಿ ಯಾರಾದರೂ ಕಣಕ್ಕಿಳಿಯಬಹುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಗಾಗಿ ಬಿಜೆಪಿಯಲ್ಲಿ 18 ಆಕಾಂಕ್ಷಿಗಳಿದ್ದು, ಅವರ ಜೊತೆಗೆ ಸಭೆ ನಡೆಸಲಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ವಿಜಯೇಂದ್ರ ಅಥವಾ ಲಕ್ಷ್ಮಣ ಸವದಿ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಬಹುದು ಎಂದು ಹೇಳಿದ್ದಾರೆ.

ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಪಕ್ಷ ಅಭ್ಯರ್ಥಿಗಳ ಪಟ್ಟಿ ಮಾಡಿ ಬಿಜೆಪಿ ಹೈಕಮಾಂಡ್ ಗೆ ರವಾನಿಸಲಿದ್ದು, ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರು ಬಸವಕಲ್ಯಾಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos