ಭಾರತಕ್ಕೆ ಧನ್ಯವಾದ ಹೇಳಿದ ವಿಶ್ವಸಂಸ್ಥೆ

ಭಾರತಕ್ಕೆ ಧನ್ಯವಾದ ಹೇಳಿದ ವಿಶ್ವಸಂಸ್ಥೆ

ವಾಷಿಂಗ್ಟನ್ .ಜ.12 : ವಿಶ್ವಸಂಸ್ಥೆಗೆ ಸದಸ್ಯ ರಾಷ್ಟ್ರಗಳು ನೀಡಬೇಕಾದ ಪೂರ್ಣ ಪ್ರಮಾಣದ ಮೊತ್ತವನ್ನು ಭಾರತ ನಿಗದಿತ ಸಮಯಕ್ಕೂ ಮೊದಲೇ ಪಾವತಿಸಿದೆ.
ಈ ಮೂಲಕ ಭಾರತ 193 ಸದಸ್ಯ ರಾಷ್ಟ್ರಗಳ ಪೈಕಿ ನಿಗದಿತ ಅವಧಿಗೂ ಮುನ್ನವೇ ಪೂರ್ಣ ಹಣ ಪಾವತಿಸಿದ ನಾಲ್ಕನೇ ರಾಷ್ಟ್ರವಾಗಿದ್ದು, ವಿಶ್ವಸಂಸ್ಥೆ ಭಾರತಕ್ಕೆ ಧನ್ಯವಾದ ತಿಳಿಸಿದೆ.  ಫೆ.1ರವರೆಗೆ ಸಮಯ ನೀಡಲಾಗಿತ್ತು.
ಇದಕ್ಕೂ ಮುನ್ನವೇ ಭಾರತ ಕಳೆದ ಜ.10ರಂದು ವಿಶ್ವಸಂಸ್ಥೆಗೆ ಒಟ್ಟು 23,396,496 ಡಾಲರ್ (166 ಕೋಟಿ ರೂ.) ಪಾವತಿ ಮಾಡಿದೆ. ಭಾರತಕ್ಕೂ ಮುಂಚೆ ಅಮೆರಿಕ, ಪೋರ್ಚುಗಲ್ ಮತ್ತು ಉಕ್ರೇನ್ ವಿಶ್ವಸಂಸ್ಥೆಗೆ ಪೂರ್ತಿ ಹಣ ಪಾವತಿಸಿವೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ರ ವಕ್ತಾರ ಸ್ಟಿಫನ್ ಗುಜರಿಕ್ ನಾಲ್ಕೂ ರಾಷ್ಟ್ರಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos