ಬೆಂಗಳೂರು: ನಂಜನಗೂಡು ತಾಲ್ಲೂಕಿನ ಕಾಡಿನ ಅಂಚುಗಳಲ್ಲಿರುವ ಗ್ರಾಮಗಳಲ್ಲಿ ಹುಲಿಗಳ ಹಾವಳಿ ಜಾಸ್ತಿಯಾಗಿದೆ. ಗ್ರಾಮಸ್ಥರು ತಮ್ಮ ಹಸು, ದನ ಮತ್ತು ಕುರಿಗಳನ್ನು ಮೇಯಿಸಲು ಹೊರವಲಯಕ್ಕೆ ಹೋದಾಗ ಹುಲಿಗಳು ಸಾಕು ಪ್ರಾಣಿಗಳ ಮೇಲೆ ಆಕ್ರಮಣ ನಡೆಸಿ ಕೊಂದು ತಿನ್ನುತ್ತಿರುವ ಘಟನೆಗಳು ನಡೆಯುತ್ತಿವೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಹುಲಿ ಆತಂಕ ಹೆಚ್ಚಾಗಿದೆ. ಹನಗೋಡು, ಅಣ್ಣೆಗೆರೆ ಸೇರಿ ಅಕ್ಕಪಕ್ಕದ ಗ್ರಾಮದಲ್ಲಿ ಹುಲಿ ಓಡಾಡಿಕೊಂಡಿದ್ದು ಹೊಲ, ತೋಟಗಳಲ್ಲಿ ಹುಲಿ ಹೆಜ್ಜೆ ಗುರುಗಳು ಪತ್ತೆಯಾಗಿವೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ ಗ್ರಾಮದ ರಸ್ತೆಗಳಲ್ಲೂ ಹುಲಿ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ಜನ ಒಟ್ಟಿಯಾಗಿ ಓಡಾಡಲು ಹೆದರುವಂತಾಗಿದೆ. ಸದ್ಯ ಅರಣ್ಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಹುಲಿ ಹೆಜ್ಜೆ ಪರಿಶೀಲಿಸಿದ್ದಾರೆ.