ಬಲಿಷ್ಟ ಹುಲಿಗಳ ಕಾದಾಟ ವಿಡಿಯೋ ವೈರಲ್

ಜೈಪುರ, ಅ.17 : ಬಲಿಷ್ಠ ಹುಲಿಗಳೆರಡು ಕಾದಾಡುವ ರೋಚಕ ದೃಶ್ಯವನ್ನು ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ಎಂಬುವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದ ವಿಡಿಯೋ ವೈರಲ್ ಆಗಿದೆ. ರಣಥಂಬೂರ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸೆರೆ ಹಿಡಿಯಲಾದ ಟೈಗರ್ 57 ಮತ್ತು 58 ನಡುವಿನ ಕಾದಾಟದ ದೃಶ್ಯ ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಹುಲಿಗಳೆರಡು ಮಲಗಿದ್ದಾಗ ಮತ್ತೊಂದು ಹುಲಿ ಹೊಂಚು ಹಾಕಿ ದಾಳಿ ಮಾಡುತ್ತದೆ. ಈ ವೇಳೆ ಹುಲಿಯೊಂದ ಅಲ್ಲಿಂದ ಪರಾರಿಯಾಗುತ್ತದೆ. ಇನ್ನುಳಿದ ಎರಡು ಹುಲಿಗಳು ಕಾಳಗ ನಡೆಸುತ್ತವೆ. ಈ ವೇಳೆ ವಿಡಿಯೋದಲ್ಲಿ ಕೇಳಿಬರುವ ಹುಲಿಗಳ ಘರ್ಜಿಸುವ ಹಿನ್ನೆಲೆ ಧ್ವನಿ ದೃಶ್ಯವನ್ನು ಮತ್ತಷ್ಟು ರೋಚಕವಾಗಿಸುತ್ತದೆ. ಕಾದಾಟದ ಕೊನೆಯಲ್ಲಿ ಟೈಗರ್ 57 ವಿಜಯಶಾಲಿಯಾಯಿತು. ಇದರಲ್ಲಿ ಯಾವುದೇ ಹುಲಿಗೆ ಗಾಯವಾಗಿಲ್ಲ ಎಂದು ಮತ್ತೊಂದು ಟ್ವೀಟ್ನಲ್ಲಿ ಕಾಸ್ವಾನ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos