ಅಲೋಕ್ ಕುಮಾರ್ ಹೆಗಲಿಗೆ ಈ ಜವಾಬ್ದಾರಿ

ಅಲೋಕ್ ಕುಮಾರ್ ಹೆಗಲಿಗೆ ಈ ಜವಾಬ್ದಾರಿ

ಬೆಂಗಳೂರು, ಮಾ. 27: ದೇಶದಾದ್ಯಂತ ಕೊರೊನ ಮಹಾಮಾರಿ ಕಾಯಿಲೆಯಿಂದ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಲಾಕ್ ಡೌನ್ ಹಿನ್ನಲೆಯಲ್ಲಿ, ಸಾರ್ವಜನಿಕರು ರಾಜ್ಯಾದ್ಯಂತ ಅಗತ್ಯ ವಸ್ತುಗಳು ಸಿಗದೇ ಪರದಾಡುವಂತಾಗಿದೆ. ಅದರಲ್ಲೂ ಸಂಚಾರ ವ್ಯವಸ್ಥೆಯಲ್ಲಿ ಬಂದ್ ಆಗಿರುವ ಕಾರಣ, ಅಗತ್ಯ ವಸ್ತುಗಳು ತಲುಪದೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಹಿನ್ನಲೆಯಲ್ಲಿ ಅಗತ್ಯ ಸೇವೆಗಳ ಸಂಚಾರ ನಿರ್ವಹಣೆಯ ಹೊಣೆಯನ್ನು ನಿಭಾಹಿಸಲು ಎಡಿಜಿಪಿ ಅಲೋಕ್ ಕುಮಾರ್ ಹೆಗಲಿದೆ ನೀಡಿ, ಡಿಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

ಈ ಕುರಿತಂತೆ ಆದೇಶ ಹೊರಡಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ರಾಜ್ಯದಲ್ಲಿ ಅಗತ್ಯ ವಸ್ತುಗಳ ಸಾಗಾಣೆ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿ, ಜನಸಾಮಾನ್ಯರು ತೊಂದರಗೆ ಈಡಾಗಿದ್ದಾರೆ. ಈ ನಿಟ್ಟಿನಲ್ಲಿ ಸುಗಮ ಸಂಚಾರದ ಮೂಲಕ ಅಗತ್ಯ ವಸ್ತುಗಳು ಸಾರ್ವಜನಿಕರಿಗೆ ತಲುಪುವ ಕೆಲಸ ಆಗಬೇಕಿದೆ. ಹೀಗಾಗಿ ಇಂತಹ ವ್ಯವಸ್ಥಿತ ಕಾರ್ಯವನ್ನು ಉತ್ತಮವಾಗಿ ನಿರ್ವಹಣೆ ಮಾಡಲು, ಕೆ ಎಸ್ ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ವಹಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ, ರಾಜ್ಯಾದ್ಯಂತ ಅಗತ್ಯ ವಸ್ತುಗಳ ಸೇವೆಯ ಸಂಚಾರದಲ್ಲಿ ವ್ಯತ್ಯಾಸ ಆಗಿದ್ದು ತಪ್ಪಲಿದೆ. ಸುಗಮ ಅಗತ್ಯ ವಸ್ತುಗಳ ಸಂಚಾರಕ್ಕೆ ಅನುಕೂಲ ಆಗುವ ಮೂಲಕ, ಅಗತ್ಯ ವಸ್ತುಗಳ ಕೊರತೆ ನೀಗಲಿದೆ. ಜೊತೆಗೆ ಜನಸಾಮಾನ್ಯರು ಅಗತ್ಯ ವಸ್ತುಗಳಿಗಾಗಿ ಪರದಾಡುವಂತ ಪರಿಸ್ಥಿತಿ ತಪ್ಪಲಿದೆ. ಆದ್ರೇ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಖರೀದಿಸುವುದನ್ನು ಮಾತ್ರ ಮರೆಯಬೇಡಿ. ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಿ ಎಂಬುದು ನಮ್ಮ ಕೋರಿಕೆ ಕೂಡ.

 

ಫ್ರೆಶ್ ನ್ಯೂಸ್

Latest Posts

Featured Videos