ಈ ಅಡುಗೆ ಭಟ್ಟ ನಿರ್ಗತಿಕರ ಪಾಲಿನ ಆಶಾಕೀರಣ

  • In State
  • April 5, 2020
  • 177 Views
ಈ ಅಡುಗೆ ಭಟ್ಟ ನಿರ್ಗತಿಕರ ಪಾಲಿನ ಆಶಾಕೀರಣ

ಕುಕನೂರು, ಏ. 05: ಕೊರೊನಾದಿಂದ ಅದೇಷ್ಟೋಜೀವಗಳು ಒಂದೊತ್ತಿನ ಊಟಕ್ಕಾಗಿ ಪರಿತಪಿಸುವಂತಹ ಪರಸ್ಥಿತಿ ನಿರ್ಮಾಣವಾಗಿದ್ದು, ಎಲ್ಲರಿಗೂ ಗೊತ್ತಿರುವ ವಿಷಯವೇ.

ಆದರೆ, ಪ್ರತಿ ದಿನ ಅಡುಗೆ ಮಾಡಿಸಿ ಹಂಚುವ ದಾನಿಗಳು ಇದ್ದಾರೆ ಆದರೆ ಅವರಿಗೆಲ್ಲಾ ಬೆನ್ನೆಲುಬಾಗಿನಿಂತಿದ್ದು ಮಾತ್ರ ಈ ಭಟ್ಟರು. ಕುಕನೂರು ಪಟ್ಟಣದಲ್ಲಿ ಪ್ರತಿ ದಿನ ಬೆಳಗಿನ ಪಹಾರ ಮದ್ಯಾಹ್ನ, ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ಸುಮಾರು ಹತ್ತು ದಿನಗಳಿಂದ ನಿರಂತವಾಗಿ ಮಾಡುತ್ತಾಬರುತ್ತಿದ್ದು, ಎಲ್ಲಾ ನಿರ್ಗತಿಕರಿಗೆ ಆಶಾಕೀರಣವಾಗಿದ್ದು ಮಾತ್ರ ಪಟ್ಟಣದ ನಿವಾಸಿ ನೀಲಕಂಠಪ್ಪ ಬಣ್ಣದಭಾವಿ ಎನ್ನುವವರು.

ಇವರುಶ್ರೀ ಅನ್ನಪೂರ್ಣೆಶ್ವರಿ ಅಡುಗೆ ತಯಾರಕರು ಎಂದು ಹೆಸರುವಾಸಿಯಾದ ಇವರು ಪ್ರತಿ ದಿನ ಯಾವುದೇ ಪಲಾಪೇಕ್ಷೆ ಇಲ್ಲದೆ ಯಾರುಸಹಾಯ ಕೇಳಿದರು ತಕ್ಷಣ ಹಾಜರಾಗಿ ಅವರು ಎಷ್ಟು ಹೇಳಿದರು ಹಾಗೂ ಯಾವ ಅಡುಗೆಯನ್ನು ಹೇಳಿದರು ಚಾಚು ತಪ್ಪದೆ ಮಾಡುತ್ತಿದ್ದಾರೆ. ಇವರ ಈ ಸೇವೆ ನಿಸ್ವಾರ್ಥದಿಂದಕೂಡಿದ್ದು ಯಾವುದೆ ಹಣವನ್ನು ಪಡೆಯುವದಿಲ್ಲಾ.

ಪಟ್ಟಣದಲ್ಲಿ ಇಷ್ಟು ದಿನ ಹಂಚಿಕೆ ಮಾಡಲಾದ ಎಲ್ಲಾ ಅಡುಗೆಯನ್ನು ತಯಾರಿಸಿದವರು ಇವರೇ ಆಗಿದ್ದಾರೆ ಎನ್ನುವದು ವಿಶೇಷವಾಗಿದೆ. ಕೊರೊನಾ ನಿಯಂತ್ರಣ ಮಾಡುವ ಪಧಾರ್ಥಗಳನ್ನು ಬಳಸಿ ಇವರು ಪ್ರತಿ ದಿನ ಅಡುಗೆ ತಯಾರಿಸುತ್ತಿದ್ದಾರೆ. ಪ್ರತಿ ದಿನ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಯ ಸಿಬ್ಬಂದಿಗಳಿಗೆ, ಕಡು ಬಡವರಿಗೆ, ನಿರ್ಗತಿಕರಿಗೆ, ಅಲೆಮಾರಿ, ಜನಾಂಗದವರಿಗೆ, ಸರಿಯಾದ ಸಮಯಕ್ಕೆ ಊಟ ತಯಾರಿಸಿನೀಡುತ್ತಾರೆ. ಹಾಗೇ ಕರಿಬೇವು, ಮೆಂತೆಯನ್ನು ಅತೀ ಹೆಚ್ಚು ಬಳಸಿ ಇವರುಮಾಡುವ ಅಡುಗೆಯನ್ನು ಒಮ್ಮೆ ಸವಿದರೆಸಾಕು ಮತ್ತೆ ಮತ್ತೆ ಸವಿಯಬೇಕು ಅನಿಸದೆಇರಲಾರದು. ಇವರ ಸೇವೆಯನ್ನು ಕಂಡಂತಹ ಪಟ್ಟಣದ ಅನೇಕರು ತಮ್ಮ ಮನಸ್ಪೂರ್ತಿಯಾಗಿ ಇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಲಾಕ್‌ಡೌನ್ ಮುಗಿಯುವವರೆಗೆ ನಿರಂತವಾಗಿಸಾಗಲಿ ಎನ್ನುವದು ಎಲ್ಲರ ಆಶಯವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos