ಮದ್ಯಂತರೆ ಚುನಾವಣೆ ಅಗತ್ಯ ಇರಲಿಲ್ಲ

ಮದ್ಯಂತರೆ ಚುನಾವಣೆ ಅಗತ್ಯ ಇರಲಿಲ್ಲ

 ಕೆಆರ್ ಪುರ, ಡಿ. 02: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಕೋಮುವಾದಿಗಳ ಪಕ್ಷ ಮತ್ತು ಅನರ್ಹ ಶಾಸಕರನ್ನು ವಿರೋಧಿಸಿ ಸಾಮಾಜಿಕ ನ್ಯಾಯದ ಹಿನ್ನೆಲೆಯ ಸಿದ್ದಾಂತದ ಮೇಲೆ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕರೆ ನೀಡಿದರು.

ಕೆ.ಆರ್.ಪುರದ ಖಾಸಗಿ ಹೋಟೆಲ್ ನಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಮದ್ಯಂತರೆ ಚುನಾವಣೆ ಅಗತ್ಯ ಇರಲಿಲ್ಲ, ಇದು ಸರ್ಕಾರ ಮತ್ತು ಜನರಿಗೆ ಹೊರೆಯಾಗಿದೆ, ಇದಕ್ಕೆ ಕಾರಣರಾದ ಅನರ್ಹರೆಂಬ ಹಣೆ ಪಟ್ಟಿಹೊತ್ತಿರುವ ಯಾರೇ ಆಗಲಿ ಅವರಿಗೆ ಮತ ನೀಡಬೇಡಿ ಎಂದರು.

ಈಗಾಗಲೇ ಸುಪ್ರಿಂ ಕೋರ್ಟ್ ಅನರ್ಹರೆಂದು ತೀರ್ಪು ನೀಡಿದೆ ಹಾಗಾಗಿ ನಾವು ಸಹ ಜನತಾ ನ್ಯಾಯಾಲಯದಲ್ಲೂ ಅನರ್ಹರೆಂದು ತೀರ್ಪು ನೀಡುವಂತೆ ಮನವಿ ಮಾಡಿದರು.

ಕೆಲ ದಲಿತ ಅಲ್ಪಸಂಖ್ಯಾತರ ಮುಖಂಡರೂ ಸಹ ಬಿಜೆಪಿಯಲ್ಲಿದ್ದಾರೆ ಅವರು ಕೇವಲ ಅಧಿಕಾರಕ್ಕಾಗಿ ಅಥವಾ ಹಣದ ಆಸೆಗೆ ಅಲ್ಲಿದ್ದಾರೆಯೇ ಹೊರತು ಇನ್ಯಾವುದೇ ಸಾಮಾಜಿಕ ಕಳಕಳಿ ಇಲ್ಲ ಎಂದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಗುರು ಪ್ರಸಾದ್ ಕೆರಗೋಡ , ಲಕ್ಷ್ಮಿನಾರಾಯಣ್ ನಾಗವಾರ, ದೊಡ್ಡಯಲ್ಲಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos