ಮೂಕ ಪ್ರಾಣಿಗಳ ರೋಧನೆಗೆ ಮಿಡಿದ ಗ್ರಾಮಸ್ಥರು

ಮೂಕ ಪ್ರಾಣಿಗಳ ರೋಧನೆಗೆ ಮಿಡಿದ ಗ್ರಾಮಸ್ಥರು

ನೆಲಮಂಗಲ, ಮಾ. 29: ಸುಮಾರು 4485 ಅಡಿ ಎತ್ತರದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತೀ ದೊಡ್ಡ ಬೆಟ್ಟ ಶಿವಗಂಗೆ ಬೆಟ್ಟ, ಮಾರಾಣಾಂತಿಕ ರೋಗ ಕಾರೋನಾ ಹಿನ್ನಲೆಯಲ್ಲಿ ಇಡೀ‌ ದೇವಾಲಯ ಪ್ರವಾಸಿಗರಿಗೆ ನಿಷಿದ್ಧವಾಗಿದೆ, ಈ ಹಿನ್ನಲೆಯಲ್ಲಿ ಬೆಟ್ಟದಲ್ಲಿದ್ದ ಮೂಕ ಪ್ರಾಣಿಗಳ ರೋಧನೆಗೆ ಗ್ರಾಮಸ್ಥರು ಮಿಡಿದಿದ್ದಾರೆ.

ಶಿವಗಂಗೆ ಬೆಟ್ಟ ಹತ್ತಿ ಕೋತಿಗಳಿಗೆ ನೀರು ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಕೊರೋನಾ ಭೀತಿ ದೇವಸ್ಥಾನಗಳು ದೇಶಾದ್ಯಂತ ಲಾಕ್ ಡೌನ್ ಆಗಿದೆ, ಸದಾ ಪ್ರವಾಸಿಗರಿಂದ ಕೂಡಿರುತ್ತಿದ್ದ ಶಿವಗಂಗೆ ಬೆಟ್ಟ ಬಣಗಡುವದಲ್ಲದೇ, ಕೋತಿಗಳಿಗೆ ಆಹಾರವಿಲ್ಲದಂತಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಕ್ಷಿಣಕಾಶಿ ಶಿವಗಂಗೆಯಲ್ಲಿರುವ ಪ್ರಾಣಿಗಳಿಗೆ ಆಹಾರದ ಕೊರತೆಗೆ ಗ್ರಾಮಸ್ಥರು ನೆರವಿಗೆ ಧಾವಿಸಿ, ಆಹಾರ ನೀಡಿದ್ದಾರೆ.

ಜಿಲ್ಲೆಯಲ್ಲೇ ನೆಲಮಂಗಲ ತಾಲೂಕಿನ ಶ್ರೀ ಕ್ಷೇತ್ರ ಶಿವಗಂಗೆ ಬೆಟ್ಟ ಚಾರಣಿಗರ ಸ್ವರ್ಗವಾಗಿತ್ತು. ಕೋತಿಗಳಿಗೆ ನೀರು ಕುಡಿಸಿ ಆಹಾರ ನೀಡಿ ಸಂತೈಸಿದ ಗ್ರಾಮಸ್ಥರು ಸಾರ್ಥಕ ಕೆಲಸ ಮಾಡಿದ್ದಾರೆ. ದೇವಾಲಯ ಬಂದ್ ಆದ ಬಳಿಕ ಬೆಟ್ಟಕ್ಕೆ ಪ್ರವಾಸಿಗರು ಸಂಪೂರ್ಣ ಬ್ರೇಕ್ ಆಗಿದೆ, ಇದರಿಂದಾಗಿ ಕೋತಿಗಳು ಆಹಾರವಿಲ್ಲದೆ ಕಂಗಾಲಾಗಿದ್ದವು, ನೀರು ಕೊಟ್ಟ ಕೂಡಲೇ ದಣಿವಾರಿಸಿಕೊಂಡ ವಾನರ ಗುಂಪು, ಜೀವ ಜಲಕ್ಕೆ ಹಾತೋರೆಯುತ್ತಿದ್ದವು. ಇನ್ನೂ ಸಾವಿರಾರು ವಾನರಗಳಿಗೆ ಶಿವಗಂಗೆ ಗ್ರಾಮಸ್ಥರಿಂದ ನೀರು ಆಹಾರ ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos