ಬಾಣವಾಡಿ ಕ್ಷೇತ್ರದಲ್ಲಿ ಮಹಿಳೆಯರು ಪಾರಮ್ಯ

ಬಾಣವಾಡಿ ಕ್ಷೇತ್ರದಲ್ಲಿ ಮಹಿಳೆಯರು ಪಾರಮ್ಯ

ನೆಲಮಂಗಲ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸೋಲೂರು ಹೋಬಳಿಯ ಬಾಣವಾಡಿ ಪಂಚಾಯತಿಯ ಪಾಲನಹಳ್ಳಿ ಹಾಗೂ ಬಿಟ್ಟಸಂದ್ರ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಮಹಿಳೆಯರು ಪಾರಮ್ಯ ಮೆರೆದಿದ್ದಾರೆ.
ಪಾಲನಹಳ್ಳಿ ವಾರ್ಡ್ನಿಂದ ಮಮತಾ ಮಂಜುನಾಥ್ 153 ಮತ ಪಡೆದು, ಸಮೀಪದ ಪ್ರತಿಸ್ಪರ್ದಿ ಪಾರ್ವತಮ್ಮ 147 ಮತ ಗಳಿಸಿದರು, ಆರು ಮತಗಳ ಅಂತರದಿಂದ ಮಮತಾ ಮಂಜುನಾಥ್ ಜಯಗಳಿಸಿದರೇ,ಬಿಟ್ಟಸಂದ್ರ ಪಂಚಾಯತಿಯಿಂದ ಚನ್ನೋಹಳ್ಳಿ ಅನುಸೂಚಿತ ಜಾತಿ ವಿಭಾಗದಿಂದ ಸ್ಪರ್ದಿಸಿದ್ದ ಸರೋಜಮ್ಮ ನರಸಿಂಹಮೂರ್ತಿ 96 ಮತಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ವಿಜೇತ ಅಭ್ಯರ್ಥಿ ಮಮತಾ ಪತಿ ಮಂಜುನಾಥ್ ಮಾಧ್ಯಮಗಳೊಂದಿಗೆ ಮಾತನಾಡಿ, ಪಾಲನಹಳ್ಳಿ ಕ್ಷೇತ್ರ ಪೂಜ್ಯನೀಯವಾದ ಸ್ಥಳ, ಇಲ್ಲಿ ವಿಜಯಶಾಲಿಯಾಗಲೂ, ಎಲ್ಲಾ ಮತದಾರರ ಸಹಕಾರ ಮತ್ತು ಊರಿನ ಗ್ರಾಮಸ್ಥರಾದ ರಾಜಶೇಖರಯ್ಯ, ಶಾಂತಪ್ಪಾ, ಸಿದ್ದಲಿಂಗಪ್ಪ, ದೊಡ್ಡಗಂಗಯ್ಯ, ಮಂಜುನಾಥ್, ರವಿಕುಮಾರ್, ಅಂದಾನಯ್ಯ, ಭೈರವ, ತಾ.ಪಂ ಮಾಜಿ ಸದಸ್ಯರಾದ ಶಿವಮ್ಮ ನಾಗರಾಜು ಸಹಕಾರ ಹಾಗೂ ಪಾಲನಹಳ್ಳಿ ಮಠದ ಡಾ.ಶ್ರೀ.ಶ್ರೀ.ಸಿದ್ದರಾಜು ಮಹಾ ಸ್ವಾಮಿಜೀ ಆಶಿರ್ವಾದಿಂದ ಜಯಶೀಲರಾಗಲು ಸಹಕಾರಿಯಾಯಿತು ಎಂದರು.
ಪಾಲನಹಳ್ಳಿ ಮಠದ ಡಾ.ಶ್ರೀ ಸಿದ್ದರಾಜು ಮಹಾಸ್ವಾಮಿಜಿ ಮಾಧ್ಯಮಗಳೊಂದಿಗೆ ಮಾತನಾಡಿ, ಗ್ರಾಮ ಪಂಚಾಯತಿ ಚುನಾವಣೆ ಗ್ರಾಮ ಗ್ರಾಮಗಳಲ್ಲಿ ವೈಷಮ್ಯ ಉಂಟು ಮಾಡುತ್ತೇವೆ, ಆದರೆ ಚುನಾವಣೆ ಮುಂಚಿತವಾಗಿ ಏನೇ ಇದ್ದರೂ, ನಂತರ ಸೌರ್ಹಾದಮಯವಾದ ವಾತಾವರಣ ಉಂಟುಮಾಡಬೇಕು, ಗ್ರಾಮದ ಅಭಿವೃದ್ಧಿ ಗೆ ನೆರವಾಗಬೇಕು, ನಮ್ಮ ಗ್ರಾಮದಲ್ಲಿ ಮಹಿಳಾ ಸಬಲೀಕರಣ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಗಿದೆ, ಮಮತಾ ಮಂಜುನಾಥ್ ಹಾಗೂ ಸರೋಜಮ್ಮರಿಗೆ ನನ್ನ ಆಶೀರ್ವಾದದ ಜೊತೆ ಜನರ ಆಶೀರ್ವಾದ ವಾಗಿದೆ ಎಂದರು. ಮಮತಾ ಬೆಂಬಲಿಗರು, ಹಿತೈಷಿಗಳು, ಊರಿನ ಗ್ರಾಮಸ್ಥರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos