ಪ್ರವಾಸಿಗರನ್ನು ಬೆನ್ನಟ್ಟಿದ ಹುಲಿ

ಜೈಪುರ, ಡಿ. 1 : ಹುಲಿಯೊಂದು ಪ್ರವಾಸಿಗರನ್ನು ಬೆನ್ನಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ ನಡೆದಿದ್ದು, ಸುಲ್ತಾನ ಎಂಬ ಹುಲಿ ಪ್ರವಾಸಿಗರ ವಾಹನವನ್ನು ಬೆನ್ನಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಆದರೆ ಪ್ರಾಣಿ ಪ್ರಿಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಹುಲಿ ವಾಹನವನ್ನು ಬೆನ್ನಟ್ಟಿಲ್ಲ ಬದಲಿಗೆ ಆಟವಾಡುತ್ತಿದೆ ಎಂದು ಹೇಳಿದ್ದಾರೆ.
ಕಾಡು ಪ್ರಾಣಿಗಳು ತಮ್ಮ ವಾಸಸ್ಥಾನವನ್ನು ಕಳೆದುಕೊಂಡಿರುವುದರಿಂದ ಈ ರೀತಿ ಮಾಡುತ್ತಿವೆ ಎಂದು ಕೆಲವರು ಹೇಳಿದ್ದಾರೆ. ಆದರೆ ವರದಿಯ ಪ್ರಕಾರ ರಾಷ್ಟ್ರೀಯ ಉದ್ಯಾನ ಹೆಚ್ಚು ಹುಲಿಗಳ ತಾಣವಾಗಿದೆ. ತನ್ನ ಸಾಮರ್ಥ್ಯಕ್ಕಿಂತಲೂ ಹೆಚ್ಚು ಹುಲಿಗಳನ್ನು ಹೊಂದಿದೆ ಎಂದು ವರದಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos