ಶಾಲಾಭಿವೃದ್ಧಿಗೆ ಶಿಕ್ಷಕರ ಪಾತ್ರ ಮುಖ್ಯ

ಶಾಲಾಭಿವೃದ್ಧಿಗೆ ಶಿಕ್ಷಕರ ಪಾತ್ರ ಮುಖ್ಯ

ತುರುವೇಕೆರೆ: ಯಾವುದೇ ಒಂದು ಶಾಲೆ ಅಭಿವೃದ್ದಿ ಪಥದತ್ತ ಸಾಗಬೇಕೆಂದರೆ ಆ ಶಾಲೆಯ ಸಹ ಶಿಕ್ಷಕರ ಪಾತ್ರ ಅಷ್ಟೇ ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಪ್ರಶಸ್ತಿ ವಿಜೇತ ಹಾಗು ಸರ್ಕಾರಿ ಬಾಲಕರ ಪಾಠಶಾಲಾ ಮುಖ್ಯ ಶಿಕ್ಷಕ ಸತೀಶ್‌ಕುಮಾರ್ ತಮ್ಮ ಅಂತರಾಳದ ಮಾತುಗಳನ್ನಾಡಿದರು.
ಪಟ್ಟಣದ ಸರ್ಕಾರಿ ಬಾಲಕರ ಪಾಠಶಾಲೆ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನನ್ನ ಸಹೋದ್ಯೋಗಿಗಳ ಸಹಕಾರದಿಂದ ಶಿಕ್ಷಣ ಇಲಾಖೆ ನನ್ನನ್ನು ಗುರ್ತಿಸಿ ಜಿಲ್ಲಾ ಪ್ರಶಸ್ತಿ ನೀಡಿದೆ ಎಂದರು.
ಲಯನ್ಸ್ ದತ್ತು ಶಾಲೆ ಇಂದು ತಾಲ್ಲೂಕಿನಲ್ಲಿಯೇ ಮಾದರಿ ಶಾಲೆಯಾಗಿ ರೂಪುಗೊಂಡಿದ್ದು ಸುಮಾರು ೪೦೦ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ಫ್ರೌಢಶಾಲೆ ಪ್ರಾರಂಭಿಸುವ ಹೆಬ್ಬಯಕೆಯಾಗಿದ್ದು ಅದಕ್ಕೆ ಲಯನ್ಸ್ ಸಂಸ್ಥೆ ಸಹಕಾರ ಅತಿ ಮುಖ್ಯ ಎಂದರು.
ಲಯನ್ಸ್ ಅಧ್ಯಕ್ಷ ರಾಜಣ್ಣ ಮಾತನಾಡಿ ಈ ಶಾಲೆ ತಾಲ್ಲೂಕಿನಲ್ಲಿಯೇ ಉತ್ತಮ ಶಾಲೆಯಾಗಿದ್ದು ಈ ನನ್ನ ಅವಧಿಯಲ್ಲಿ ಶಾಲೆಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos