ವರ್ಷದ ಆರಂಭದಲ್ಲೇ ದರ ಏರಿಕೆಯ ಬಿಸಿ

ವರ್ಷದ ಆರಂಭದಲ್ಲೇ ದರ ಏರಿಕೆಯ ಬಿಸಿ

ನವದೆಹಲಿ, ಜ. 01: ಇಂದಿನಿಂದಲೇ ದೇಶಾದ್ಯಂತ ಸಬ್ಸಿಡಿ ರಹಿತ ಎಲ್​ಪಿಜಿ ಅಥವಾ ಅಡುಗೆ ಅನಿಲ ದರ ಏರಿಕೆಯಾಗಿದ್ದು, ತಿಂಗಳ ಅಂತರದಲ್ಲಿ ಐದನೇ ಬಾರಿಗೆ ಹೆಚ್ಚಳವಾಗುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ.

ರಾಷ್ಟ್ರ ರಾಜಧಾನಿ ಮತ್ತು ಮುಂಬೈನಲ್ಲಿ ಪ್ರತಿ ಸಿಲಿಂಡರ್​ಗೆ 19 ಮತ್ತು 19.5 ರೂ. ಏರಿಕೆ ಕಂಡಿದ್ದು, ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ಗೆ ದೆಹಲಿಯಲ್ಲಿ 714 ರೂ. ಮತ್ತು ಮುಂಬೈನಲ್ಲಿ 684.50 ರೂ. ಇರುವುದಾಗಿ ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ ತಿಳಿಸಿದೆ. ಆದರೆ, ಡಿಸೆಂಬರ್​ ತಿಂಗಳಿನಲ್ಲಿ ದೆಹಲಿಯಲ್ಲಿ 695 ಮತ್ತು ಮುಂಬೈನಲ್ಲಿ 665 ರೂ. ಕೋಲ್ಕತದಲ್ಲಿ 21.5 ರೂ ಏರಿಕೆ ಕಾಣುವ ಮೂಲಕ ಪ್ರತಿ ಸಿಲಿಂಡರ್​ಗೆ 747 ರೂ. ಮತ್ತು ಚೆನ್ನೈನಲ್ಲಿ 20 ರೂ. ಹೆಚ್ಚಳವಾಗುವುದರೊಂದಿಗೆ 734 ರೂ. ಆಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos