ಜನಸಾಮಾನ್ಯರ ಕೈ ಸುಡುತ್ತಿದೆ ತೈಲ ಬೆಲೆ

  • In State
  • August 4, 2020
  • 149 Views
ಜನಸಾಮಾನ್ಯರ ಕೈ ಸುಡುತ್ತಿದೆ ತೈಲ ಬೆಲೆ

ತುಮಕೂರು:ಕೊರೋನಾ ಆರ್ಥಿಕ ಸಂಕಷ್ಟದ ನಡುವೆ ಕೇಂದ್ರ ಸರ್ಕಾರ ನಿರಂತರವಾಗಿ ಇಂಧನ ಬೆಲೆಯನ್ನು ಏರಿಕೆ ಮಾಡಿ ಬಡ ಜನರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷರಾದ ಡಾ.ಇಂತಿಯಾಜ್ ಅಹಮ್ಮದ್ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ನಾಲ್ಕೈದು ತಿಂಗಳುಗಳಿಂದ ಕೊರೋನ ಸಂಕಷ್ಟದಲ್ಲೇ ಜೀವನ ಸಾಗಿಸುತ್ತಿರುವ ದೇಶದ ಜನತೆಗೆ ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿನಿತ್ಯ ಏರಿಕೆಯಾಗಿ ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ ೧೩೦ ಡಾಲರ್ ಇತ್ತು. ಆಗಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಗೆ ಕಾಂಗ್ರೆಸ್ ಸರ್ಕಾರ ೨.೪೧ ಲಕ್ಷ ಕೋಟಿ ರೂ ಸಬ್ಸಿಡಿ ನೀಡುತ್ತಿತ್ತು. ಈಗ ಕಚ್ಚಾ ತೈಲದ ಬ್ಯಾರೆಲ್ ಗೆ ಬೆಲೆ ೪೦ ಡಾಲರ್ ಆಸುಪಾಸು ಇದೆ. ಈಗ ತೈಲ ಬೆಲೆ ೨೫ ರೂ. ಲೀಟರ್‌ಗೆ ಮಾರಬೇಕು. ಕೇಂದ್ರ ಸರ್ಕಾರ ಒಂದು ರೂ. ಸಬ್ಸಿಡಿ ನೀಡುತ್ತಿಲ್ಲ. ಅಬಕಾರಿ ಸುಂಕ ಏರಿಸಿದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದು ಟೀಕಿಸಿದ್ದಾರೆ.

ಇಂಧನವನ್ನು ಬಡವರು ಹೆಚ್ಚಾಗಿ ಬಳಸುತ್ತಾರೆ. ದುಬಾರಿ ಬೆಲೆ ತೆತ್ತು ಬದುಕು ದೂಡುವ ಸಂಕಷ್ಟದ ಸ್ಥಿತಿಯನ್ನು ನಿರ್ಮಿಸಿ, ಸಾಮಾನ್ಯ ನಾಗರಿಕರ ರಕ್ತವನ್ನು ಹೀರಿ ಸರ್ಕಾರದ ಬೊಕ್ಕಸ ತುಂಬಿಸುವ ಕಾರ್ಯವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ೨೦ ರೂಪಾಯಿಗೆ ಡೀಸೆಲ್ ಹಾಗೂ ೨೫ ರೂಪಾಯಿಗೆ ಪೆಟ್ರೋಲ್ ನೀಡಬೇಕಿತ್ತು.

ಊಹೆಗೂ ಮೀರಿದ ಮಟ್ಟದಲ್ಲಿ ಇಂಧನ ಬೆಲೆ ಏರಿಕೆ ಆಗಿದೆ. ಸಾಮಾನ್ಯ ಜನ ಬಳಸುವ ಡೀಸೆಲ್ ಇಂದು ಪೆಟ್ರೋಲ್ ಗಿಂತ ಹೆಚ್ಚಿನ ಬೆಲೆ ಒಂದು ಸ್ಥಿತಿ ಎದುರಿಸುತ್ತಿದೆ. ದೇಶದ ಇತಿಹಾಸದಲ್ಲೇ ಅತ್ಯಂತ ಕಡಿಮೆ ಇರಬೇಕಿದ್ದ ಬೆಲೆ ಅತಿ ಹೆಚ್ಚು ಮೊತ್ತಕ್ಕೆ ಏರಿದೆ. ಪೆಟ್ರೋಲ್ ಡೀಸೆಲ್ ನಿಂದಲೇ ಜನರನ್ನು ಸುಡುವ ಕಾರ್ಯ ಮಾಡುತ್ತಿದ್ದೀರಿ. ಇದೇನಾ ಅಚ್ಚೆ ದಿನ್. ಬೇಸತ್ತ ಇದೇ ಜನ ನಿಮ್ಮನ್ನು ಮುಂದೆ ಅಧಿಕಾರದಿಂದ ಕೆಳಗಿಳಿಸುವ ಕಾರ್ಯ ಮಾಡಲಿದ್ದಾರೆ ಎಂದು ಡಾ.ಇಂತಿಯಾಜ್ ಅಹಮ್ಮದ್ ಎಚ್ಚರಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos