ಗುಲಾಬಿ ಆಂದೋಲನ

ಗುಲಾಬಿ ಆಂದೋಲನ

ಕೆ.ಆರ್.ಪುರ, ಮಾ. 07: ಧೂಮಪಾನ ಹಾಗೂ ಮದ್ಯಪಾನ ಮಾಡುವುದರಿಂದ ಆರೋಗ್ಯ ಕೆಡುವುದಲ್ಲದೆ ಪರಿಸರ ಕಲುಷಿತವಾಗುತ್ತದೆ ಎಂದು ಬಸವನಪುರ ವಾರ್ಡ್ ಆರೋಗ್ಯ ನಿರೀಕ್ಷ ಗುರುರಾಜ್ ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಹಾಗೂ ರಾಷ್ಟಿçÃಯ ತಂಬಾಕು ನಿಯಅಂತ್ರಣ   ಕೋಟ್ಟಾ 2003 ಅಡಿಯಲ್ಲಿ  ಬಿ.ವಿ.ಎನ್.ಹೆಚ್.ಎಸ್. ಶಾಲೆಯ ಎನ್.ಸಿ.ಸಿ ವಿಧ್ಯಾರ್ಥಿಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಗುಲಾಬಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಂಬಾಕು ನಿಯಂತ್ರಣ ಕಾನೂನು ಕೋಟ್ಟಾ ೨೦೦೩ ಅಡಿಯಲ್ಲಿ ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು ಮತ್ತು ಮಾರಾಟದ ಮೇಲೆ ಭಾರತ ಸರ್ಕಾರ ನಿಷೇಧ ಹೇರಿತ್ತು. ಕಾನೂನು ಉಲ್ಲಂಘನೆ ಮಾಡುವ ವ್ಯಕ್ತಿಗಳಿಗೆ ಎರಡು ವರ್ಷ ಜೈಲುವಾಸ ಹಾಗೂ 1000 ರೂ ದಂಡ ವಿಧಿಸಲಾಗುತ್ತದೆ ಎಂದರು.

ಆದರೆ ನಗರದ ಚಿಲ್ಲರೆ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು ಕೆಲ ಸಾರ್ವಜನಿಕರು ಬೀಡಿ, ಸಿಗರೇಟ್ ಸೇವನೆ ಮಾಡುತ್ತಿರುತ್ತಾರೆ ಅಂತಹವರಿಗೆ ತಿಳಿ ಹೇಳಿ ಗುಲಾಬಿ ಹೂ ನೀಡಿ ಸಿಗರೇಟ್ ಸೇವನೆ ನಿಲ್ಲಿಸುವಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಯಿತು ಎಂದರು.

ಬಿ.ವಿ.ಎನ್.ಹೆಚ್.ಎಸ್. ಶಾಲೆಯ  ಎನ್.ಸಿ.ಸಿ ವಿದ್ಯಾರ್ಥಿಗಳಿಂದ ತಂಬಾಕು ಬಳಕೆ ಯಿಂದ ಬರುವ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಲು ಗುಲಾಬಿ ಅಂದೋಲನದಲ್ಲಿ ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸಲಾಯಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಕಮಾಂಡರ್ ರವಿ ಕಿರಣ್, ಶಾಲೆಯ ಮುಖ್ಯೋಪಾಧ್ಯಾಯರಾದ ಸಬ್ ಲೆಫ್ಟಿನೆಂಟ್ ಚಂದ್ರಕಾಂತ್, ಎನ್.ಸಿ.ಸಿ. ಅಧಿಕಾರಿ ನಾರಾಯಣಸ್ವಾಮಿ, ಅರೋಗ್ಯ ನಿರೀಕ್ಷಕ ಶ್ರೀಶೈಲ, ಲಕ್ಷ್ಮಯ್ಯ ಮುಂತಾದವರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos