ಕರ್ನಾಟಕ ಗಡಿಯಲ್ಲಿ ಜನವೋ ಜನ ಕಾಡುತ್ತಿರುವ ಅತಂಕ

ಕರ್ನಾಟಕ ಗಡಿಯಲ್ಲಿ ಜನವೋ ಜನ ಕಾಡುತ್ತಿರುವ ಅತಂಕ

ಬಿಜಾಪುರ, ಮಾ. 28: ಕೊರೋನಾ ಹಿನ್ನೆಲೆಯಲ್ಲಿ ಕೂಲಿಗಾಗಿ ರಾಜ್ಯ ಹಾಗೂ ವಿವಿಧ ಹೊರ ರಾಜ್ಯಗಳಿಂದ ವಲಸೆ ಹೋಗಿದ್ದವರು ತಮ್ಮ ಗ್ರಾಮಗಳಿಗೆ ಹಿಂತಿರುಗಲು ರಾಜ್ಯದ ಗಡಿಗಳಲ್ಲಿ ಆಯಾ ರಾಜ್ಯಗಳು ನಿರ್ಭಂದ ಹೇರಿದ ಹಿನ್ನೆಲೆಯಲ್ಲಿ ಗಡಿಯಲ್ಲಿ ಜನ ಸೇರ್ಪಡೆಯಾಗಿರುವುದರಿಂದ ಸಾಮಾಜಿಕ ಅಂತರದ ಆತಂಕ ಕಾಡುತ್ತಿದೆ.

ರಾಜಸ್ಥಾನ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಗುಜರಾತ್, ಬಿಹಾರ, ಮಧ್ಯ ಪ್ರದೇಶ, ಹಲವಾರು ರಾಜ್ಯದ ಜನರು ಗಡಿಭಾಗದಲ್ಲಿ ಬಂದಳಿದ್ದಾರೆ, ಅವರನ್ನು ನಮ್ಮ ಕರ್ನಾಟಕ ರಾಜ್ಯದ ಪೋಲಿಸರು ಬಿಟ್ಟರೆ, ಮಹಾರಾಷ್ಟ್ರ ರಾಜ್ಯದ ಪೋಲಿಸರು ಅವರನ್ನು ಮರಳಿ ಕಳಿಸುತ್ತಿದ್ದಾರೆ. ಹೀಗಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಸೇರಿದ್ದಾರೆ, ಎರಡು ಮೂರು ದಿನಗಳಿಂದ ಇವರು ಕರ್ನಾಟಕ ಗಡಿಭಾಗದಲ್ಲಿ ಉಳಿದ್ದಾರೆ, ಮಹಾರಾಷ್ಟ್ರದ ಸೋಲಾಪುರ ಜಿಲ್ಲಾಧಿಕಾರಿ ಜೊತೆಯಲ್ಲಿ ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲಾಧಿಕಾರಿಗಳು ಮಾತನಾಡಿ, ಇವರಿಗೆ ತಮ್ಮ ತಮ್ಮ ರಾಜ್ಯಗಳಿಗೆ ಹೋಗಲು ಅನುಮತಿ ನೀಡಬೇಕೆಂದು ಅವರ ಮನವಿಯಾಗಿದೆ, ಮಹಿಳೆಯರು, ಸಣ್ಣ ಪುಟ್ಟ ಮಕ್ಕಳಿಗೆ, ಗರ್ಭಿಣಿಯರು, ಕುಂಟರು, ಅಂಗವಿಕಲರಿಗೆ, ಯುವಕರು ಸೇರಿದಂತೆ ಸಾವಿರಾರು ಜನ ಜಮಾಯಿಸಿದ್ದಾರೆ.

ಕರ್ನಾಟಕ ರಾಜ್ಯದ ಗಡಿಭಾಗದಲ್ಲಿ ಚಕ್ ಪೋಸ್ಟ್ಗೆ ಇಂಡಿ ಮತ್ತು ಚಡಚಣ ತಹಶಿಲ್ದಾರ್, ಇಂಡಿ ಎಸಿ ಸ್ನೇಹಲ್ ಸುಧಾಕರ ಲೋಕಂಡೆ, ಚಡಚಣ ಸಿಪಿಐ  ಮತ್ತು ಇಂಡಿ ಸಿಪಿ ಐಹೋರ್ತಿ, ತಾ ಆರೋಗ್ಯ ಅಧಿಕಾರ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

ಕರ್ನಾಟಕ ರಾಜ್ಯದ ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಬೇಕಾಬಿಟ್ಟಿ ತಪಾಸಣೆ ಮಾಡುತ್ತಿದ್ದಾರೆ, ತಾ ಅಧಿಕಾರಿಗಳು ಸ್ಥಳದಲ್ಲಿ ಯಾವೂದೆ ಸೂಕ್ತ ರೀತಿಯಲ್ಲಿ ತಪಾಸಣೆ ಮಾಡುತ್ತಿಲ್ಲಾ, ಆರೋಗ್ಯ ಇಲಾಖೆಯಿಂದ ಸೌಲಭ್ಯಗಳು ಇಲ್ಲ ಗಡಿಭಾಗದ ಚಕ್ ಪೋಸ್ಟ್ ಹತ್ತಿರ ಇಲಾಖೆ ಸಿಬ್ಬಂದಿಗಳಿಗೆ ಮಾಸ್ಕ್ ಇಲ್ಲವಾಗಿದ್ದು ಕೂಡಲೆ ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡು ಮುಂದಾಗುವ ಅನಾಹುತವನ್ನು ನಿವಾರಣೆ ಮಾಡುವುದು ಅತಿ ಜರೂರಾಗಿ ಆಗಬೇಕಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos