ರಾಷ್ಟ್ರೀಯ ಪಕ್ಷಗಳು ನಿತ್ಯ ಜಗಳದಲ್ಲಿ ಕಾಲಹರನ ಮಾಡುತ್ತಿವೆ

ರಾಷ್ಟ್ರೀಯ ಪಕ್ಷಗಳು ನಿತ್ಯ ಜಗಳದಲ್ಲಿ ಕಾಲಹರನ ಮಾಡುತ್ತಿವೆ

ಕೆ.ಆರ್.ಪುರ, ಡಿ. 02: ರಾಷ್ಟ್ರೀಯ ಪಕ್ಷಗಳು ನಿತ್ಯ ಜಗಳದಲ್ಲಿ ಕಾಲಹರನ ಮಾಡುತ್ತ, ಪ್ರಜಾ ಪ್ರಭುತ್ವವನ್ನು ತಮ್ಮ ರಾಜಕೀಯವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆ.ಆರ್.ಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಚಳುವಳಿ ರಾಜನ್ನ ಅವರು ದೂರಿದರು.

ಕ್ಷೇತ್ರದ ರಾಮಮೂರ್ತಿ ನಗರ, ವಿಜಿನಾಪುರ, ಹೊರಮಾವು ಸೇರಿದಂತೆ ಇತರೆ ವಾರ್ಡ್ ಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಅವರ ಮಾತನಾಡಿದರು.

ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ನಿತ್ಯ ಜಗಳದಲ್ಲಿ ಅಭಿವೃದ್ಧಿಯನ್ನು ಗಾಳಿ ತೂರಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣರಾಗಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬೀಕರ ನೆರೆ ಪರಿಸ್ಥಿತಿ ಸಂಭವಿಸಿದ್ದು, ವಾಸಿಸಲು ಜನ ತತ್ತರಿಸಿ ಹೋಗಿರುವ ಸಮಯದಲ್ಲಿ ರಾಷ್ಟ್ರೀಯ ಪಕ್ಷಗಳು ಅಧಿಕಾರದ ದಾಹಕ್ಕಾಗಿ ಪ್ರಜಾ ಪ್ರಭುತ್ವ ವನ್ನು ಕಗ್ಗೊಲೆ ಮಾಡಿ ಉಪ ಚುನಾವಣೆಗೆ ಕಾರಣರಾಗಿದ್ದಾರೆ ಎಂದು ದೂರಿದರು.

ಕರ್ನಾಟಕದ ಮಹಾಜನತೆ ಇಂತಹ ವ್ಯಕ್ತಿ ಗಳನ್ನು ಉಪ ಚುನಾವಣೆಯಲ್ಲಿ ಸೋಲಿಸುವ ಮೂಲಕ ರಾಜ್ಯದಲ್ಲಿ ಬದಲಾವಣೆಯನ್ನು ತರಬೇಕೆಂದು ಮನವಿ ಮಾಡಿದರು.

ನಾನು ಎರಡು ದಶಕ ಗಳಿಗೂ ಹೆಚ್ಚು ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾಮಾನ್ಯರ ಮಧ್ಯೆ ಇದ್ದ ವ್ಯಕ್ತಿ ಆಗಿರುತ್ತಾನೆ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಯಾಗಿದ್ದು ಸಾಮಾಜಿಕ ನ್ಯಾಯ ಹಾಗೂ ಪಾರದರ್ಶಕ ಆಡಳಿತ ಕ್ಕಾಗಿ ತಮ್ಮ ಅಮೂಲ್ಯವಾದ ಮತವನ್ನು ಕಬ್ಬು ರೈತ ಗುರುತಿಗೆ ಮತ ನೀಡಿ ನನ್ನನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಾಮ್ರಾಟ್ ಮಂಜುನಾಥ್, ಡಿ.ಎಸ್ಎಸ್ ಮಲ್ಲಯ್ಯ, ಸುಬ್ರಮಣ್ಯ, ನಲ್ಲಾರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos