ಸರ್ಕಾರ ನೇಮಕಾತಿ ಎಂಬುದನ್ನು ಮರೆತ ಹಾಗಿದೆ

ಸರ್ಕಾರ ನೇಮಕಾತಿ ಎಂಬುದನ್ನು ಮರೆತ ಹಾಗಿದೆ

ಯಡ್ರಾಮಿ: ಹಲವು ವರ್ಷಗಳಿಂದ ಸರ್ಕಾರ ನೇಮಕಾತಿ ಎಂಬುದನ್ನು ಮರೆತ ಹಾಗೆ ಕಾಣಿಸುತ್ತಿದೆ. ನೇಮಕಾತಿ ಮಾಡಿದರು ಕೆ. ಪಿ.ಎಸ್.ಸಿ. ಯಲ್ಲಿ ಅವ್ಯವಾಹರ ನಡೆಯುತ್ತಿರುವುದು ಕೇಳಿ ಬರುತ್ತಿವೆ. ಪ್ರಶ್ನೆ ಪತ್ರಿಕೆ ಸೊರಿಕೆ ನೇಮಕಾತಿ ಗೊಂದಲ ಜೊತೆಯಲ್ಲಿ ಸುಮಾರು ವರ್ಷದ ಹಿಂದಿನ ನೇಮಕಾತಿ ಮಾಡಿ ಅವುಗಳಿಗೆ ಆದೇಶ ಪತ್ರ ಸಿಗದೆ ಅಭ್ಯಾರ್ಥಿಗಳು ಬೆಂಗಳೂರಿಗೆ ಬಂದು ಹೋಗುವ ಕೆಲಸ ಮಾಡುತ್ತಿದ್ದಾರೆ. ಕರೆ ಮಾಡಿ ಕೇಳಿದರೆ ಮುಂದಿನ ತಿಂಗಳು ಬಿಡುತ್ತಾರೆ ಎನ್ನುವುದು ಅಧಿಕಾರಿಗಳ ಕಂಠಪಾಠವಾಗಿದೆ. ಇದು ಒಂದು ರೀತಿ ಗೊಳಾದರೆ ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರ ಗೋಳು ಕೆಳವರೆ ಇಲ್ಲದಂತಾಗಿದೆ. ಸರ್ಕಾರದಲ್ಲಿ ಬ್ಯಾಕ್‍ಲಾಗ್ ಹುದ್ದೆಗಳು ಖಾಲಿ ಇದ್ದರು ನೇಮಕಾತಿ ಮಾಡಲು ಮನಸು ಮಾಡದಿರೊದು ತುಂಬಾ ಶೋಚನೀಯ ವಿಚಾರವಾಗಿದೆ.

ಬ್ಯಾಕ್‍ಲಾಗ್ ಹುದ್ದೆ ನೇಮಕಾತಿ ಮಾಡದೆ ದಶಕಗಳು ಕಳೆದವು ಹಲವು ಸರ್ಕಾರ ಉರಳಿದವು ಯಾವುದೊಂದು ಸರ್ಕಾರ ಇದರ ಬಗ್ಗೆ ಮಾತನಾಡತ್ತಿಲ್ಲ. ಚುನಾವಣೆ ಪ್ರಚಾರದಲ್ಲಿ ಎಸ್.ಸಿ, ಎಸ್.ಟಿ ಜನರ ಬೆಂಬಲ ಬೇಕು ನಂತರ ಅವರನ್ನು ಸರ್ಕಾರ ಕೆಲಸದಿಂದ ದೂರ ಇಡುವ ಕೆಲಸ ರಾಜಕಿಯ ಪಕ್ಷಗಳು ಮಾಡುತ್ತಿವೆ ಇಗಾದರೆ ಇವರ ಪ್ರಗತಿ ಯಾವಾಗ. ಸರ್ಕಾರಿ ನೌಕರಿಯನ್ನು ಎಸ್.ಸಿ, ಎಸ್.ಟಿ ಜನರು ಪಡಿಯುವುದು ಹೇಗೆ ನಮಗಾಗಿ ಮಿಸಲಿರುವ ಹುದ್ದೆಗೆ ಏಕೆ ನೇಮಕಾತಿ ಮಾಡುತ್ತಿಲ್ಲ ಎಂದು ಯಡ್ರಾಮಿ ತಾಲ್ಲೂಕಿನ ಅಂಬೇಡ್ಕರ ಸೇನೆ ಉಪಾಧ್ಯಕ್ಷರಾದ ಹಯ್ಯಾಳಪ್ಪ. ಹೊಸಮನಿ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos