ವಿದ್ಯಾರ್ಥಿನಿ ಸಾವು

ವಿದ್ಯಾರ್ಥಿನಿ ಸಾವು

ಪಶ್ಚಿಮ ಬಂಗಾಳ, ಜ. 27 : ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ರೈಲು ಢಿಕ್ಕಿಯಾಗಿ 21 ವರ್ಷದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಜಲ್ ಪೈಗುರಿ ಜಿಲ್ಲೆಯಲ್ಲಿ ನಡೆದಿದೆ ಎಂದು  ರೈಲ್ವೇ ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿ ಸ್ನೇಹಿತೆ ಕೂಡ ಜೊತೆಗಿದ್ದು ರೈಲು ಗುದ್ದುವುದನ್ನು ತಪ್ಪಿಸಿಕೊಳ್ಳಲು ನದಿಗೆ ಹಾರಿ ಗಂಭೀರ ಗಾಯಗೊಂಡಿದ್ದಾಳೆ. ಓಡ್ಲಾಬರಿ ಪ್ರದೇಶದ ಗೀಸ್ ನದಿಯ ರೈಲ್ವೇ ಬ್ರಿಡ್ಜ್ ನಲ್ಲಿ ಈ ಘಟನೆ ನಡೆದಿದೆ.

ಇಬ್ಬರು ವಿದ್ಯಾರ್ಥಿನಿಯರು ರೈಲ್ವೇ  ಬ್ರಿಡ್ಜ್ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಪ್ಯಾಸೆಂಜರ್ ರೈಲು ಬರುತ್ತಿದ್ದರೂ ಗಮನಿಸದೆ ನಿರಂತರವಾಗಿ ಫೋಟೋ ತೆಗೆದುಕೊಳ್ಳುತ್ತಿದ್ದರು, ಪರಿಣಾಮವಾಗಿ ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬಳು ವಿದ್ಯಾರ್ಥಿನಿ ನದಿಗೆ ಹಾರಿ ಗಂಭಿರ ಗಾಯಗೊಂಡಿದ್ದಾಳೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಸ್ಥಳೀಯ  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿ

 

ಫ್ರೆಶ್ ನ್ಯೂಸ್

Latest Posts

Featured Videos