ಕೋಳಿಗಳ ಮಾರಣಹೋಮ

ಕೋಳಿಗಳ ಮಾರಣಹೋಮ

ಚಿಕ್ಕೋಡಿ, ಮಾ. 11: ಕೊರೊನಾ ವೈರಸ್ ಎಫೆಕ್ಟ್ ದಿಂದ  ಕೋಳಿ ಮಾಂಸದ ದರ ನೆಲೆ ಕಚ್ಚಿರುವ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ಲೋಳಸೂರ ಗ್ರಾಮದ ಪೋಟ್ರಿಫಾರ್ಮನ ಮಾಲಿಕ ರೊಬ್ಬರು ಕೋಳಿಗಳನ್ನು ಜೀವಂತ ಹೂತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಲೋಳಸೂರ ಗ್ರಾಮದ ನಜೀರ ಮಕಾಂದಾರ ಎಂಬುವವರು ಕರೋನಾ ವೈರಸ್ ಭಯದಿಂದ ಖರೀದಿದಾರರು ಇಲ್ಲದರಿಂದ ತಮ್ಮ ಸ್ವಂತ ಹೊಲದಲ್ಲಿ  65,00 ಕ್ಕೂ ಹೆಚ್ಚು ಕೋಳಿಗಳನ್ನು ಗುಂಡಿ ತೆಗೆದು ಹೂತಿದ್ದಾನೆ‌. ಖರೀರಿದಾರರು ಇಲ್ಲದಿರುವುದು ಮತ್ತು ಬೆಳೆದು ನಿಂತ ಕೋಳಿಗಳ ಆಹಾರಕ್ಕೆ ವೆಚ್ಚ ಮಾಡಲು ಸಾಧ್ಯವಾಗದೇ ಇರುವುದರಿಂದ ಕೋಳಿಗಳ ಮಾರಣಹೋಮ ನಡೆಸಲಾಗಿದೆ ಇದಕ್ಕೆ  ಕೊರೊನಾ ವೈರಸ ಕಾರಣ ಅಲ್ಲ ಎಂದಿರುವ ನಜೀರ ಮಕಾಂದಾರ ಕೊರೊನಾ ಭಯದಿಂದ ಕೋಳಿಗಳಿಗೆ ಬೇಡಿಕೆ ಕುಸಿದಿದೆ.

ಒಂದು ಕೆಜಿ ಕೋಳಿ ಮಾಂಸದ ದರ 8 ರಿಂದ 10 ರೂಪಾಯಿಗೆ ಇಳಿದಿದೆ, ಇನ್ನೊಂದೆಡೆ ಪ್ರತಿ ಕೆಜಿ ಕೋಳಿ ಆಹಾರದ ಬೆಲೆ 25 ರಿಂದ 30 ರೂಪಾಯಿ ಇದೆ. ಒಂದು ಕೆಜಿ ಮಾಂಸ ತಯಾರಾಗಬೇಕಾದರೆ 2 ಕೆಜಿ ಆಹಾರ ನೀಡಬೇಕು. ಇದರಿಂದ ಪ್ರತಿ ಕೋಳಿಯ ಹಿಂದೆ 40 ರಿಂದ 50 ರೂಪಾಯಿ ನಷ್ಟವಾಗುತ್ತಿದೆ. ಕೋಳಿ ಖರೀದಿಸುವವರು ಇಲ್ಲದ ಸಲ್ಲದ  ಕಾರಣ, ಆಹಾರಕ್ಕೆ ದುಡ್ಡು ಹೊಂದಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಕೋಳಿಗಳನ್ನು ಮಣ್ಣು ಮಾಡುತ್ತಿದ್ದೇನೆ ಎಂದು ನಜೀರ್ ಎಂಬುವರು ಪ್ರಜಾವಾಹಿನಿ ಪತ್ರಿಕೆಯ ವರದಿಗಾರ ಯಲ್ಲಪ್ಪ ಮಬನೂರ ಅವರಿಗೆ ತಿಳಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos