ಭಾರತದ ಸಂವಿಧಾನವು ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ

ಭಾರತದ ಸಂವಿಧಾನವು ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ

ತಿಪಟೂರು, ಡಿ. 06: ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಅರುವತ್ತಮೂರು ನೇ ಪರಿನಿರ್ವಾಣ ದಿನವನ್ನು ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಕುಪ್ಪಾಳು ರಂಗಸ್ವಾಮಿ, ಭಾರತದ ಸಂವಿಧಾನವು ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು, ಇದರ ನಿರ್ಮಾತೃವಾದ ಬಾಬಾ ಸಾಹೇಬರ ಅರುವತ್ತಮೂರು ನೇ ಪರಿನಿರ್ವಾಣ ದಿನವನ್ನು ಇಂದು ಹಮ್ಮಿಕೊಳ್ಳಲಾಗಿದ್ದು, ದಲಿತರಿಗೆ ಇದೊಂದು ರೀತಿಯ ಕರಾಳ ದಿನ  ಎಂದರೆ ತಪ್ಪಾಗಲಾರದು.

ಇಂತಹ ಮಹಾನ್ ಮೇಧಾವಿಯನ್ನು ಕಳೆದುಕೊಂಡ ನಮ್ಮ ಸಮಾಜ ಅನಾಥವಾಗಿದೆ. ಆದರೂ ಅವರ ತತ್ವ ಆದರ್ಶಗಳನ್ನು ನಮ್ಮ ಜನಾಂಗವು ಹಾಗೂ ಇಡೀ ದೇಶವೇ ಅನುಸರಿಸುತ್ತಿರುವುದು ಹೆಮ್ಮೆಯ ವಿಚಾರ. ಅಂತಹ ವ್ಯಕ್ತಿಯನ್ನು ಕಳೆದುಕೊಂಡ ಇಂದಿನ ಈ ದಿನವನ್ನು ನಾವ್ಯಾರೂ ಕೂಡ ಮರೆಯಲು ಸಾಧ್ಯವಿಲ್ಲ ಶತಶತಮಾನಗಳು ಕಳೆದರೂ ಬಾಬಾ ಸಾಹೇಬರು ಅವರಾಗಿಯೇ ಇರುವವರು ಅದಕ್ಕೆ ಕಾರಣ ಅವರು ಕೊಟ್ಟ ಈ ಸಂವಿಧಾನ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪಿ ರಾಮ,ಯ್ಯ ದಲಿತ ಮುಖಂಡರಾದ ಗಾಂಧಿನಗರ ಬಸವರಾಜು, ಈಚನೂರು ಮಹದೇವ, ನಾಗತಿಹಳ್ಳಿ ಕೃಷ್ಣಮೂರ್ತಿ, ಈಚನೂರು ನರಸಿಂಹಮೂರ್ತಿ, ಟೀಕೆ ಕುಮಾರ್, ಬಜಗೂರು ಮಂಜುನಾಥ್, ಮಾರನಗೆರೆ ಶಿವಣ್ಣ ಮೊದಲಾದವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos