ಕುಸಿದ ಫುಟ್ಪಾತ್ : ಚರಂಡಿಗೆ ಬಿದ್ದ ಯುವಕರು

ಜೈಪುರ, ಅ. 26 : ಫುಟ್ಪಾತ್ ಕುಸಿದ ಕಾರಣ ಇಬ್ಬರು ಯುವಕರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಸಿರೋಹಿ ನಗರದಲ್ಲಿ ನಡೆದಿದೆ. ಗಾಯಗೊಂಡ ಯುವಕರಿಬ್ಬರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.
ಫುಟ್ಪಾತ್ ಕುಸಿಯುವ ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಓರ್ವ ಬದಿಯಲ್ಲಿ ನಿಂತಿದ್ದಾನೆ. ಮತ್ತೋರ್ವ ಬರುತ್ತಿದ್ದಂತೆ ಫುಟ್ಪಾತ್ ಕುಸಿದಿದೆ. ಪರಿಣಾಮ ಯುವಕರಿಬ್ಬರು ಚರಂಡಿಗೆ ಬಿದಿದ್ದಾರೆ. ಚರಂಡಿ ಕಾಲುವೆ ಮೇಲೆ ಪಾದಾಚಾರಿ ಮಾರ್ಗ ನಿರ್ಮಿಸಲಾಗಿತ್ತು. ನೀರಿನ ಹೊಡೆತಕ್ಕೆ ಪಾದಚಾರಿ ಮಾರ್ಗ ಕುಸಿದಿದೆ ಎನ್ನಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos