ಪ್ರಕೃತಿ ಪಕ್ಷಿ ಲೋಕದ ಸಿವಿಲ್ ಇಂಜಿನಿಯರಗಳು ಈ ಗಿಜುಗ

ಪ್ರಕೃತಿ ಪಕ್ಷಿ ಲೋಕದ ಸಿವಿಲ್ ಇಂಜಿನಿಯರಗಳು ಈ ಗಿಜುಗ

ಹುಬ್ಬಳ‍್ಳಿ, ಜ. 24: ಪಕ್ಷಿಗಳು ಗುಂಪುಗೂಡುತ್ತವೆ ಚಿಲಿಪಿಲಿ ನಾದದ ಕಲರವದಿಂದ ಮನ ತಣಿಸುವ ಸಂಗೀತ ನುಡಿಸುತ್ತವೆ. ಆದರೆ, ಇಂದು ಪಕ್ಷಿಗಳು ಮರೆಯಾಗುತ್ತಿರುವುದು ಪಕ್ಷಿ ಪ್ರೇಮಿಗಳಿಗೆ ಆತಂಕ ಸೃಷ್ಟಿಸಿದೆ. ಇನ್ನೂ ಅಲಂಕಾರಗಳಿಗಾಗಿ ಗುಬ್ಬಚ್ಚಿ ಗೂಡು ಬಳಸುತ್ತಿರುವುದು ಗುಬ್ಬಚ್ಚಿ ಕಡಿಮೆಯಾಗುತ್ತಿವೆ ಅದರಲ್ಲೂ ಗಿಜುಗ ಪಕ್ಷಿಗಳು ನಾಶದತ್ತ ಸಾಗಿವೆ.

ಹೌದು, ನೀವು ಎಲ್ಲರೂ ಯಾವುದಾದರು ಉಪಯೋಗಸದೇ ಇರದ ನೀರಿರುವ  ಬಾವಿಗಳನ್ನೋ ಅಥವಾ  ಪ್ರಪಾತದ ಕೆಳಗೆ ನೀರಿನ ಉಪಸ್ಥಿತಿಯ ಸ್ಥಳದಲ್ಲಿ ಇಲ್ಲವೇ ಒಂದು ಎತ್ತರದ ತುದಿಯಲ್ಲಿ ಕೆಳಗಡೆ  ದೊಡ್ಡ ಕಂದಕ, ಇಂಥಹ, ಸ್ಥಳಗಳಲ್ಲಿ ಚಿಕ್ಕ-ಚಿಕ್ಕ ಗಿಡ, ಕಂಟಿ ಅಥವಾ ಮುಳ್ಳಿನ ಸಸಿಗಳಿಗೆ ಗೂಡುಗಳು ತೂಗುತ್ತಿರುವುದನ್ನು ನೋಡಿಯೇ ನೋಡಿರುತ್ತೀರಿ. ಆ ಗೂಡು ಬೇರೆ ಯಾವ ಪಕ್ಷಿಯದು ಅಲ್ಲ. ಪಕ್ಷಿಗಳ ಗೂಡುಕಟ್ಟುವದರಲ್ಲಿ ಮಹಾ ಚಾಣಾಕ್ಷ ಗೀಜಗದ ಪಕ್ಷಿ.ಇನ್ನು ಕೆಲವರು ಅದಕ್ಕೆ ಚಿಟಗುಬ್ಬಿ ಅಂತಾನೂ ಕರೀತಾರೆ. ಈ ಪಕ್ಷಿಗಳನ್ನು ನೀವು ಜನವರಿಯಿಂದ ಜೂನ್ ವರೆಗೆ ನೋಡಿದರೆ ಗಂಡು – ಹೆಣ್ಣು ಎರಡೂ ನೋಡಲು ನಮ್ಮ ಗುಬ್ಬಿಯ ತರ ಕಾಣುತ್ತವೆ. ಯಾವಾಗ ಈ ಜೂನ್ ನಂತರ ತಮ್ಮ ಸಂತಾನೋತ್ಪತ್ತಿಯ ಸಮಯ ಬರುತ್ತದೋ, ಆಗ ಈ ಗಂಡು ಪಕ್ಷಿಗೆ ಆಕರ್ಷಣೀಯಾಗುವಂತಹ ಕಪ್ಪು ಕೊಕ್ಕು ಹಾಗೂ ಬೆನ್ನೆಲ್ಲಾ ಹಳದಿ ಬಣ್ಣದಿಂದ ಮೋಹಕವಾಗಿ ಕಾಣಲು ಪ್ರಾರಂಭವಾಗುತ್ತದೆ. ಆಗ ಹೆಣ್ಣು ಪಕ್ಷಿಗಳು ಈ ಸಮಯದಲ್ಲಿ ಗಂಡುಗಳಿಂದ ದೂರವಿರಲು ಪ್ರಯತ್ನಿಸುತ್ತವೆ. ಈ ಸಮಯದಲ್ಲಿ ಗಂಡು ಪಕ್ಷಿಗಳು ಇವುಗಳನ್ನು ಸಂತಾನ ಕ್ರಿಯೆಗೆ ಪ್ರೇರೇಪಿಸಲು ಗೂಡುಗಳನ್ನು ನಿರ್ಮಿಸಲು ಪ್ರಾರಂಭಿಸುತ್ತವೆ.

ಗುಬ್ಬಚ್ಚಿ ಗೂಡುಗಳಿಗೆ ಹುಲ್ಲಿನ,  ಬತ್ತದ, ಕಬ್ಬಿನ ಹುಲ್ಲಿನ ಹರಿದು, ಸೀಳಿ ತಂದ ಉದ್ದ ಎಳೆಗಳೇ ಕಚ್ಚಾ ವಸ್ತುಗಳು. ಮೊದಲು ಆ ಎಳೆಯ ಸಹಾಯದಿಂದ ಅದು ಒಂದು ಗಂಟನ್ನು ಗಿಡದ ಟೊಂಗಿಗೆ ಕಟ್ಟಿ ಅಡಿಪಾಯ ಹಾಕುತ್ತದೆ. ಅದನ್ನೇ ಕೇವಲ ತನ್ನ ಚುಂಚದ ಸಹಾಯದಿಂದ ಮನುಷ್ಯ ಬುಟ್ಟಿ ಹೆಣೆದಂತೆ ಹೆಣೆಯುತ್ತಾ ಒಂದು ಆಕ್ರತಿಗೆ ತರುತ್ತದೆ. ಹಿಂದಿನ ಅನುಭವ ಇಲ್ಲದ ಹೊಸ ಪಕ್ಷಿ ಗೂಡು ನಿರ್ಮಿಸಲು ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಂಡರೇ, ಅನುಭವೀ ಪಕ್ಷಿಗಳು, ಗೂಡಿನಲ್ಲಿಯೇ ಎರಡು ಅಂತಸ್ತು, ನೀರನ್ನು ತಂದು ಗೂಡಿಗೆ ಹಾಕಿ ತಂಪು ಮಾಡುವುದು, ಅವು ಗಾಳಿಗೆ ಹಾರದಂತೆ ಮಾಡಲು ಗೂಡಿನ ಒಂದು ಸ್ಥಳದಲ್ಲಿ ಭಾರವಾದ ಕಲ್ಲು, ವಸ್ತು ತಂದು ಅದರ ಮೇಲೆ ಮೆತ್ತನೆಯ ಗರಿ, ಹುಲ್ಲು, ಹತ್ತಿ ತಂದು  ಗಾದೆಯ ತರ ಮೃದು ಹಾಸಿಗೆ ಮಾಡುತ್ತವೆ.

ಇನ್ನು ಕೆಲವು ಅದಕ್ಕೆ ಹೂವುಗಳ ಅಲಂಕಾರ ಮಾಡುತ್ತವೆ. 1835ರ ಇಂಗ್ಲೆಂಡಿನ  ಸಂಶೋಧಕರ ವರದಿಯ ಪ್ರಕಾರ ಈ ಪಕ್ಷಿ ಸಾಯಂಕಾಲದ ಸಮಯದಲ್ಲಿ ಹಾರುಡುವ ಈ ಮಿಂಚು ಹುಳುಗಳನ್ನು ಹಿಡಿದು ತಂದು, ತಮ್ಮ ಗೂಡುಗಳಿಗೆ ಸಿಗಿಸಿ, ಅವುಗಳ ರೆಕ್ಕೆ ತುಂಡು ಮಾಡಿ ರಾತ್ರಿಯೆಲ್ಲಾ ಅವು ತಮ್ಮ ಮಿಂಚಿನ ಬೆಳಕನ್ನು ಗೂಡಿಗೆ ಅಲಂಕರಿಸುತ್ತವೆ ಎಂದೂ ಸಹ ವರದಿಯಾಗಿದೆ. ಇದೆಲ್ಲ ಈ ಹೆಣ್ಣು ಪಕ್ಷಿ ಒಲಿಸಲು ಮಾಡುವ ತಂತ್ರಗಳು. ಆದರೇ, ಇತ್ತೀಚಿನ ದಿನಗಳಲ್ಲಿ ಇವುಗಳು ಸಂಸಾರ ಮಾಡುವ ಸಮಯದಲ್ಲಿ ಇವುಗಳ ಗೂಡುಗಳನ್ನು ಈ ಗಣೇಶ್ ಚತುರ್ಥಿ ಹಬ್ಬದ ಸಮಯದಲ್ಲಿ ಅಲಂಕಾರಕ್ಕಾಗಿ ಬಳಸುತ್ತಿರುವುದರಿಂದ ಇವುಗಳ ಸಂತತಿಗೆ ಧಕ್ಕೆ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ.

ಮಂಜುನಾಥ ಕವಳಿ

ಫ್ರೆಶ್ ನ್ಯೂಸ್

Latest Posts

Featured Videos