ನೀರಿನ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು

ನೀರಿನ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು

ಹನೂರು: ಕ್ಷೇತ್ರದ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಂಡ ಮೇಡು ಸುತ್ತ ಮುತ್ತಲಿನ ಗ್ರಾಮಗಳಿಗೆ ಬೋರ್‌ವೆಲ್ ಇದ್ದು ನೀರಿನ ಸಮಸ್ಯೆ ತಲೆದೋರಿತ್ತು.
ಬೋರ್ ವೆಲ್ ಕೆಟ್ಟು ಹಲವಾರು ದಿನಗಳೇ ಕಳೆದರು ಪಂಚಾಯಿತಿಯವರು ಗಮನ ಹರಿಸದೆ ಇರುವುದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಪರಿಣಾಮ ಇಲ್ಲಿನ ಸ್ಥಳೀಯ ಗ್ರಾಮಸ್ಥರಿಗೆ ಕುಡಿಯುವುದಕ್ಕೂ ಮತ್ತು ದಿನನಿತ್ಯ ಚಟುವಟಿಕೆಗೆ ನೀರಿಲ್ಲದೆ ತೊಂದರೆಯಾಗುತ್ತು.
ಸಮಸ್ಯೆಯನ್ನು ಆಲಿಸಿದ ಜನಾಶ್ರಯ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಬಿ. ವೆಂಕಟೇಶ್ ಸಮಸ್ಯೆ ಬಗ್ಗೆ ಸ್ಥಳದಲ್ಲಿಯೇ ಗ್ರಾಮಸ್ಥರ ಜೊತೆಗೂಡಿ ಪ್ರತಿಭಟನೆ ಕೈಗೊಂಡು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕು ಆಗ್ರಹಿಸಿದ್ದರು.
ಮುಂದಿನ ದಿನಗಳಲ್ಲಿ ಬೇಸಿಗೆ ಕಾಲ ಬರುವುದರಿಂದ ಪ್ರತಿಯೊಂದು ಪಂಚಾಯಿತಿಗಳಲ್ಲಿ ಹೆಚ್ಚುವರಿಯಾಗಿ ಬೋರೆವೆಲ್ ಮತ್ತು ಕೇಬಲ್ ವೈರ್‌ಗಳನ್ನು ಇಡಬೇಕೆಂದ ಆಗ್ರಹಿಸಿ ಕೊನೆಗೆ ಗ್ರಾಮಸ್ಥರ ಕೋರಿಕೆ ಮೇರೆಗೆ ೬೦೦೦ ಲೀಟರ್ ನೀರಿನ ೩ ಟ್ಯಾಂಕರ್ ಮುಖಾಂತರ ನೀರನ್ನು ಒದಗಿಸಲಾಯಿತು. ಬೋರೆವೆಲ್ ರೆಡಿ ಮಾಡಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸ್ಪಂದಿಸಿದ ಮಾರ್ಟಳ್ಳಿ ಪಿಡಿಒ ಶಿವಣ್ಣ ಮತ್ತು ಮೆಕಾನಿಕ್ ಜಪಮಾಲೆ ಮತ್ತು ಊರಿನ ಮುಖಂಡರಾದ ಮೈಲ್ ಸ್ವಾಮಿ ಮತ್ತು ಗ್ರಾಮಸ್ಥರಿಗೆ ಧನ್ಯವಾದಗಳನ್ನು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos