ಅಂತ್ಯಸಂಸ್ಕಾರಕ್ಕೆ ಹತ್ತು ಸಾವಿರ ಪರಿಹಾರ

  • In State
  • January 10, 2021
  • 159 Views
ಅಂತ್ಯಸಂಸ್ಕಾರಕ್ಕೆ ಹತ್ತು ಸಾವಿರ ಪರಿಹಾರ

ಹರಪನಹಳ್ಳಿ: ಹೈನುಗಾರಿಕೆಯಿಂದ ಜೀವನ ಸಾಗಿಸಲು ಸಹಾಯ ಹಸ್ತ ನೀಡುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘ ಅವರ ಸಂಕಷ್ಟಗಳಿಗೂ ನೆರವು ನೀಡಲು ಹಿಂಜರಿಯುವುದಿಲ್ಲವೆಂದು ತೊಗರಿಕಟ್ಟಿ ಹಾಲು ಉತ್ಪಾದಕರ ಸಹಾಕಾರ ಸಂಘದ ಅಧ್ಯಕ್ಷ ಈ. ದುರುಗಪ್ಪ ಹೇಳಿದರು.
ತಾಲೂಕಿನ ತೊಗರಿಕಟ್ಟಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಸದಸ್ಯೆ ಬಿ.ಗಾಯಿತ್ರಮ್ಮ ಜ.8ರಂದು ಮೃತಪಟ್ಟಿದ್ದು ಅವರ ಶವ ಸಂಸ್ಕಾರಕ್ಕೆ ರಾಯಚೂರು ಬಳ್ಳಾರಿ ಕೊಪ್ಪಳ ಒಕ್ಕೂಟದ ರೈತರ ಕಲ್ಯಾಣ ಟ್ರಸ್ಟ್ ವತಿಯಿಂದ ಹತ್ತು ಸಾವಿರ ರೂ. ನಗದು ಹಣ ನೀಡಿ ಮಾತನಾಡಿದ ಅವರು, ಸಹಕಾರ ಸಂಘದ ಸದಸ್ಯರಿಗೆ ಹಾಲು ಒಕ್ಕೂಟ ಬೆನ್ನುಲಾಬಿಗೆ ನಿಂತಿರುತ್ತದೆ ಎಂದರು.
ರಾಯಚೂರು ಬಳ್ಳಾರಿ ಕೊಪ್ಪಳ ಹಾಲೂ ಒಕ್ಕೂಟ ವಿಭಾಗದ ಪ್ರಭಾರಿ ವ್ಯವಸ್ಥಾಪ ಜಿ.ಪಿ.ಪರಮೇಶ್ವರಪ್ಪ ಹಾಗೂ ತೊಗರಿಕಟ್ಟಿ ಹಾಲು ಉತ್ಪಾದಕರ ಸಹಾಕಾರ ಸಂಘದ ಉಪಾಧ್ಯಕ್ಷ ಡಿ.ಮಾರುತಿ, ಕಾರ್ಯದರ್ಶಿ ಈ ತಿಮ್ಮಪ್ಪ ನಿರ್ಧೇಶಕರಾದ ಈ ಗುರುಶಾಂತಪ್ಪ, ಈ ಚಂದ್ರಪ್ಪ, ಎಸ್ ಹನುಮಂತಪ್ಪ, ಇತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos