ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಟೀಂ ಇಂಡಿಯಾ ಆಟಗಾರ!

ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಟೀಂ ಇಂಡಿಯಾ ಆಟಗಾರ!

ಮುಂಬೈ, ಡಿ. 02: ದಕ್ಷಿಣ ಭಾರತದ ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಟೀಂ ಇಂಡಿಯಾ ಆಟಗಾರ ಮನೀಶ್ ಪಾಂಡೆ ಸಜ್ಜಾಗಿದ್ದಾರೆ. ನಟಿ ಆಶ್ರಿತಾ ಶೆಟ್ಟಿ ಜೊತೆ ಇಂದು ಮನೀಶ್ ಪಾಂಡೆ ಮದುವೆಯಾಗಲಿದ್ದಾರೆ.

ಮುಂಬೈನ ಖಾಸಗಿ ಹೋಟೆಲ್ನಲ್ಲಿ ಪಾಂಡೆ ಮದುವೆಗೆ ಕೇವಲ ಕೆಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಆದ್ರೆ ವೆಸ್ಟ್ ಇಂಡೀಸ್ ಸರಣಿಯ ನಂತರ ಬೆಂಗಳೂರಿನಲ್ಲಿ ರಿಸಪ್ಶನ್ ಏರ್ಪಡಿಸಲಾಗುವುದು. ಇಲ್ಲಿ ಎಲ್ಲಾ ಕ್ರಿಕೆಟಿಗರಿಗೆ ಆಹ್ವಾನ ನೀಡಲಾಗುವುದು.

ಪಾಂಡೆ ಮತ್ತು ನಟಿ ಆಶ್ರಿತಾ ಶೆಟ್ಟಿ, ಆಗಾಗ ಪಾರ್ಟಿಗಳಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇಬ್ಬರೂ ಎಲ್ಲೂ ತಮ್ಮ ಲವ್ ಬಗ್ಗೆ ಮಾತನಾಡಿರಲಿಲ್ಲ. ಮುಂಬೈ ಮೂಲದ ಆಶ್ರಿತಾ ಶೆಟ್ಟಿ, ತೆಲಿಕೆದೆ ಬೊಳ್ಳಿ ಎಂಬ ತುಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಟಾಲಿವುಡ್ ಪ್ರವೇಶಿಸಿದ ಆಶ್ರಿತಾ, 4 ತಮಿಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಳೆದ 2-3 ವರ್ಷಗಳಿಂದ ಇಬ್ಬರೂ ಲವ್ ಮಾಡುತ್ತಿದ್ದು, ಇದೀಗ ಮದುವೆಯವರೆಗೂ ಬಂದು ನಿಂತಿದೆ. ಮನೀಶ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ದಾಂಪತ್ಯಜೀವನ ಸುಮವಾಗಿ ಸಾಗಲಿ ಅಂತ ಹಾರೈಸೋಣ.

 

ಫ್ರೆಶ್ ನ್ಯೂಸ್

Latest Posts

Featured Videos