ಶಿಕ್ಷಕರಿಗೆ ಪ್ಯಾಕೇಜ್ ಘೋಷಣೆಗೆ  ಒತ್ತಾಯ

  • In State
  • August 19, 2020
  • 57 Views
ಶಿಕ್ಷಕರಿಗೆ ಪ್ಯಾಕೇಜ್ ಘೋಷಣೆಗೆ  ಒತ್ತಾಯ

ಹೊಸಕೋಟೆ:ಕೊರೋನಾ ಹಿನ್ನಲೆಯಲ್ಲಿ ಕಳೆದ ಹಲವು ತಿಂಗಳಿನಿಂದ ಸಂಬಳವಿಲ್ಲದೆ ಪರದಾಡ್ತಿರೋ ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಜೆಡಿಎಸ್ ವಕೀಲ ಘಟಕದ ರಾಜ್ಯಾಧ್ಯಕ್ಷ ರಂಗನಾಥ್ ಒತ್ತಾಯಿಸಿದ್ದಾರೆ.

ಅವರು ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ತಾಲೂಕಿನ ಅನುದಾನಿತ ಹಾಗೂ ಅನುದಾನರಹಿತ ಶೀಕ್ಷಕಕರ ಕುಂದು ಕೊರತೆಗಳ ಸಭೆಯನ್ನ ನಡೆಸಿ ಮಾದ್ಯಮಗಳೊಂದಿಗೆ ಮಾತನಾಡಿದರು. ಅಂದಹಾಗೆ ಕೊರೋನಾ ಕರಿನೆರಳಿನಿಂದಾಗಿ ಶಿಕ್ಷಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅತಿ ಹೆಚ್ಚು ಕೊರೋನಾ ಸಂದರ್ಭದಲ್ಲಿ ಸಮಸ್ಯೆಗಳಾಗಿರೋದು ಶಿಕ್ಷಕರಿಗೆ. ಹೀಗಾಗಿ ಕೂಡಲೇ ಗಣೇಶ ಹಬ್ಬದ ವೇಳಗೆ ಶಿಕ್ಷಕರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ರಂಗನಾಥ್ ಒತ್ತಾಯಿಸಿದರು.

ಇನ್ನೂ ಈಗಾಗಲೇ ಶಿಕ್ಷಕರ ಸಮಸ್ಯೆಗಳನ್ನ ಸರ್ಕಾರಕ್ಕೆ ಲಿಖಿತ ರೂಪದಲ್ಲಿ ಮಾಜಿ ಪ್ರಧಾನಿ ದೇವೆಗೌಡರು ಸೇರಿದಂತೆ ಜೆಡಿಎಸ್‌ನ ಮುಖಂಡರುಗಳು ನೀಡಿದ್ದರೂ, ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ ಕೂಡಲೇ ಸರ್ಕಾರ ಸಂಬಳವಿಲ್ಲದೆ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸೇವಾ ಭದ್ರತೆಯನ್ನ ಘೋಷಿಸಬೇಕು. ಇಲ್ಲವಾದರೆ ಮಾಜಿ ಪ್ರಧಾನಿ ಹೆಚ್‌ಡಿಡಿ ನೇತೃತ್ವದಲ್ಲಿ ರಾಜ್ಯವ್ಯಾಪ್ತಿ ಉಗ್ರ ಹೋರಾಟವನ್ನ ನಡೆಸೋದಾಗಿ ಎಚ್ಚರಿಕೆಯನ್ನ ನೀಡಿದರು.

.

ಫ್ರೆಶ್ ನ್ಯೂಸ್

Latest Posts

Featured Videos