ಟಿಡಿಆರ್ ಹೆಸರಲ್ಲಿ 5 ಸಾವಿರ ಕೋಟಿ ಗೋಲ್ ಮಾಲ್!

ಟಿಡಿಆರ್ ಹೆಸರಲ್ಲಿ 5 ಸಾವಿರ ಕೋಟಿ ಗೋಲ್ ಮಾಲ್!

ಬೆಂಗಳೂರು, ಏ. 26, ನ್ಯೂಸ್ ಎಕ್ಸ್ ಪ್ರೆಸ್: ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ ಟಿ ಡಿ ಆರ್ ನ ಬಹುಕೋಟಿ ಆಕ್ರಮಕ್ಕೆ ಸಂಬಂಧಿಸಿದಂತೆ ಇಂದು ಎಸಿಬಿ ಅಧಿಕಾರಿಗಳು ನಗರದ ಆರು ಕಡೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಸಂಜಯನಗರದ ಸಹಾಯಕ ಅಭಿಯಂತರ ಕೃಷ್ಣ ಲಾಲ್ ನಿವಾಸ ಆತ ಹಿಂದೆ ಕಾರ್ಯ ನಿರ್ವಹಿಸಿದ್ದ ಮಹದೇವಪುರ ಬಿಬಿಎಂಪಿ ಕಚೇರಿ ಹಾಗೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಚೇರಿ ಮತ್ತು ಕೃಷ್ಣ ಲಾಲ್ ಗೆ ಬ್ರೋಕರ್ ಗಳಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾದ ಅಮಿತ್ ರಿಕಬ್ ಚಂದ್ ಎಂಬವರ ಮನೆ ಕಚೇರಿ ಮತ್ತೊಬ್ಬ ಬ್ರೋಕರ್ ಆದ ದೀಪಕ್ ಕುಮಾರ್ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಬಿಡಿಎ ವತಿಯಿಂದ ನೀಡಲಾಗುವ ಟ್ರಾನ್ಸಪರಬಲ್ ಡೆವಲಪ್ಮೆಂಟ್ ರೈಟ್ಸ್ . ಅಂದರೆ ಖಾಸಗಿ ವ್ಯಕ್ತಿಗಳಿಗೆ ನೀಡಲಾಗು ಅಭಿವೃದ್ದಿ ಹಕ್ಕು.

ಇದನ್ನ ದಾಳವಾಗಿ ಬಳಸಿಕೊಂಡಿರುವ ಸಹಾಯಕ ಅಭಿಯಂತರ ಕೃಷ್ಣ ಲಾಲ್ ಬಿಬಿಎಂಪಿ ಅಭಿವೃದ್ಧಿ ಪಡಿಸಿದ ರಸ್ತೆಗಳನ್ನ ಖಾಸಗಿಯವರು ಮಾಡಿದ್ದಾರೆ ಎಂದು ತೋರಿಸಿ ಸಾಕಷ್ಟು ಆಕ್ರಮ ಎಸಗಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ. ಅಲ್ಲದೆ ಹಲವು ಬ್ಯುಲ್ಡರ್ಸ್ ಗಳಿಗೆ ಇದೇ ರೀತಿಯಾ ಕೃಷ್ಣ ಲಾಲ್ ಟಿಡಿಆರ್ ನ್ನು ಬಿಡಿಎ ನಿಯಾಮಾವಳಿಗಳನ್ನ ಗಾಳಿಗೆ ತೋರಿ ನೀಡಿದ್ದು ಸುಮಾರು ೫ ಸಾವಿರ ಕೋಟಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಹೌದು ಕೃಷ್ಣ. ಲಾಲ್ ಬಿಬಿಎಂಪಿ ಮಹದೇವಪುರ ವಲಯದಲ್ಲಿದ್ದಾಗ ನಿತೇಶ್ ಬ್ಯುಲ್ಡರ್ಸ್ ಗೆ ಆಕ್ರಮಾವಾಗಿ 65/ ಟಿಡಿಆರ್ ನೀಡಿ ಸುಮಾರು 42 ಕೋಟಿ ವಂಚಿಸಿರುವ ಬಗ್ಗೆ ಈ ಹಿಂದೆ ದಾಖಲೆ ಸಮೇತ ವರದಿ ಮಾಡಿತ್ತು. ಈಗ ಇದೇ ವಿಚಾರವಾಗಿ ಕೃಷ್ಣ ಲಾಲ್ ಸಂಬಂಧಿಸಿ ಎಸಿಬಿ ದಾಳಿ ಸಂಘಟನೆ ಮಾಡಿದ್ದು ಈ ಆಕ್ರಮದಲ್ಲಿ ಭಾಗಿಯಾಗಿರುವ ಹಲವು ಐಎಸ್ ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಹೆಸ್ರು ಹೊರಬರುವ ಸಾಧ್ಯತೆ ಇದೆ.

ಫ್ರೆಶ್ ನ್ಯೂಸ್

Latest Posts

Featured Videos