ʼತತ್ಸಮ ತದ್ಭವʼ ಚಿತ್ರ ಕರ್ನಾಟಕದ್ಯಾದಂತ ರಿಲೀಸ್‌

ʼತತ್ಸಮ ತದ್ಭವʼ ಚಿತ್ರ ಕರ್ನಾಟಕದ್ಯಾದಂತ ರಿಲೀಸ್‌

ಬೆಂಗಳೂರು: ನಮ್ಮ ಸ್ಯಾಂಡಲ್ವುಡ್ ನಲ್ಲಿ ಇತ್ತೀಚಿಗೆ ಹಲವಾರು ಕಥೆ ಆಧಾರಿತ ಸಿನಿಮಾಗಳು ಬರುತ್ತಾ ಇದೆ. ಕನ್ನಡ ಸಿನಿಮಾ ವೆಂದರೆ ಪರ ಭಾಷೆಯಲ್ಲಿಯೂ ಸಹ ಕನ್ನಡ ಸಿನಿಮಾಗಾಗಿ ಅನೇಕ ಅಭಿಮಾನಿಗಳು ಕಾಯುತ್ತಿರುತ್ತಾರೆ. ಏಕೆಂದರೆ ಇತ್ತೀಚಿನ ಕನ್ನಡ ಸಿನಿಮಾಗಳು ಅತ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಅದರಿಂದ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಅತ್ಯಂತ ಉತ್ತುಂಗಕ್ಕೆ ಬೆಳೆದಿದೆ.
ನಾಲ್ಕು ವರ್ಷಗಳ ನಂತರ ನಟಿ ಮೇಘನಾ ರಾಜ್‌ ʼತತ್ಸಮ ತದ್ಭವʼ ಮೂಲಕ ಪುನಾರಾಗಮನ ಮಾಡಿರುವುದು ಖುಷಿ ತಂದು ಕೊಟ್ಟಿದೆ, ಸಿನಿಮಾ ರಿಲೀಸ್‌ ಆಗುವುದುದಕ್ಕಿಂತ ಮೊದಲು ʼದೂರಿ ಲಾಲಿʼ ಎಂಬ ಹಾಡು ಅಭಿಮಾನಿಗಳ ಮನಗೆದ್ದಿತ್ತು. ಈಗಾಗಲೇ ಸಿನಿಮಾ ತೆರೆ ಕಂಡಿದ್ದು, ವಿಮರ್ಶೆ ಸುರಿದು ಬರುತ್ತಿದೆ. ಪ್ರಮುಖ ಪಾತ್ರದಲ್ಲಿ ಮೇಘನಾ ರಾಜ್‌, ಪ್ರಜ್ವಲ್‌ ದೇವರಾಜ್‌ ಮಾತ್ರ ನಟಿಸಿದ್ದಲ್ಲದೇ ಬಾಲಾಜಿ ಮನೋಹರ್‌, ಶ್ರುತಿ, ಮಹತಿ, ಗಿರಿಜಾ ಲೋಕೇಶ್‌, ಅರವಿಂದ ಅಯ್ಯರ್‌ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ವೀಕ್ಷಿಸಿದವರಿಗೆ ಸಿನಿಮಾದ ಕುರಿತಾಗಿ ಸಕಾರಾತ್ಮಕ ಮಾತುಗಳು ಮೂಡಿಸಿದೆ. ಸಿನಿಮಾದಲ್ಲಿ ಪತಿ ನಾಪತ್ತೆಯಾದ ನಂತರ ಪೊಲೀಸ್‌ರಿಂದ ಸಹಾಯ ಪಡೆಯುವ ಮಹಿಳೆಯ ಕುರಿತಾಗಿ ಸಿನಿಮಾ ವಿವರಿಸುತ್ತದೆ. ಇದೆಲ್ಲದರ ಮಧ್ಯದಲ್ಲಿ ಅವಳು ಆಘಾತಕಾರಿ ಪರಿಸ್ಥಿತಿಗಳನ್ನು ಎದುರಿಸತೊಡಗುತ್ತಾಳೆ. “ಒಬ್ಬ ಅನುಭವಿ ಪೊಲೀಸ್ ಇನ್ಸ್‌ಪೆಕ್ಟರ್ ರಹಸ್ಯಗಳು, ಸುಳ್ಳುಗಳು ಮತ್ತು ನಿಗೂಢತೆಯ ಜಾಲವನ್ನು ಬಹಿರಂಗಪಡಿಸುವ ಗೊಂದಲಕ್ಕೊಳಗಾದ ಕಾಣೆಯಾದ ವ್ಯಕ್ತಿಯ ತನಿಖೆಯನ್ನು ಪರಿಶೀಲಿಸುತ್ತಾನೆ. ಪ್ರಜ್ವಲ್‌ದೇವರಾಜ್ ಅರವಿಂದ್ ಅಶ್ವತ್ಥಾಮನ ಪಾತ್ರದಿಂದ ಉನ್ನತೀಕರಿಸಿದ ಪೋಲೀಸ್ ವಿಚಾರಣೆಯ ಕಾರ್ಯವಿಧಾನಗಳ ಚಿತ್ರಣ, ವಿಶೇಷವಾಗಿ ಅರಿಕಾ ಅವರೊಂದಿಗಿನ ಅವರ ವಿನಿಮಯದಲ್ಲಿ ಅವರು ಜೀವ ತುಂಬಿದ್ದಾರೆ.
ಚೊಚ್ಚಲ ನಟ ವಿಶಾಲ್ ಆತ್ರೇಯ ಅವರು ತತ್ಸಮ ತದ್ಭವವನ್ನು ನಿರ್ದೇಶಿಸಿ ಮತ್ತು ಬರೆದಿದ್ದಾರೆ. ಇದರ ಸಂಗೀತವನ್ನು ವಾಸುಕಿ ವೈಭವ್ ಸಂಯೋಜಿಸಿದ್ದಾರೆ, ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಶ್ರೀನಿವಾಸ್ ರಾಮಯ್ಯ ಮತ್ತು ರವಿ ಆರಾಧ್ಯ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos